7, 8 ವರ್ಷದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 13ರ ಬಾಲಕ

boy
Published on

ಪುಣೆ: ಹದಿಮೂರು ವರ್ಷದ ಬಾಲಕನೊಬ್ಬ ತನ್ನ ನೆರೆ ಮನೆ ಮಕ್ಕಳೊಂದಿಗೆ ಆಟವಾಡುವುದನ್ನು ಬಿಟ್ಟು, ಅವರ ಮೇಲೇ ಲೈಂಗಿಕ ದೌರ್ಜನ್ಯವೆಸಗಿರುವ ಕೃತ್ಯ ಪುಣೆಯಲ್ಲಿ ನಡೆದಿದೆ. ಏಳು ಮತ್ತು ಎಂಟು ವರ್ಷದ ಇಬ್ಬರು ಬಾಲಕರ ಮೇಲೆ 13 ವರ್ಷದ ಬಾಲಕ ದೌರ್ಜನ್ಯವೆಸಗಿರುವುದು ವರದಿಯಾಗಿದೆ.

ಬುಧವಾರ ಅಪ್ಪ ಅಮ್ಮ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಬೇಸರವಾದ ಕಾರಣ ಬಾಲಕ ತನ್ನ ನೆರೆ ಮನೆಯ ಇಬ್ಬರು ಬಾಲಕರನ್ನು ತನ್ನ ಮನೆಗೆ ಕರೆದಿದ್ದಾನೆ. ಮನೆಗೆ ಬಂದ ಅವರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು, ಬಾಲಕನನ್ನು ತಡೆದಿದ್ದಾರೆ. ಓರ್ವ ಬಾಲಕನ ಮನೆಗೆ ಸುದ್ದಿಯನ್ನೂ ಮುಟ್ಟಿಸಿದ್ದಾರೆ. ಇನ್ನೋರ್ವ ಬಾಲಕ ತನ್ನ ಮೇಲೆ ಈ ರೀತಿಯ ದೌರ್ಜನ್ಯವಾಗಿದೆ ಎಂದು ತಂದೆ ತಾಯಿ ಬಳಿ ಹೇಳಿಕೊಂಡಿದ್ದಾನೆ. ಎರಡೂ ಬಾಲಕರ ಪೋಷಕರು ಈ ಕುರಿತಾಗಿ ಪೊಲೀಸ್​ ದೂರು ದಾಖಲಿಸಿದ್ದಾರೆ.

ಪ್ರಾರ್ಥಮಿಕ ತನಿಖೆ ನಡೆಸಿರುವ ಪೊಲೀಸರು, ದೌರ್ಜನ್ಯ ನಡೆದಿರುವುದು ಸತ್ಯ ಎಂದು ದೃಢೀಕರಿಸಿದ್ದಾರೆ. ಬಾಲಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶನಿವಾರದಂದು ಬಾಲಾಪರಾಧಿ ನ್ಯಾಯಮಂಡಳಿಯ ಎದುರು ಹಾಜರುಪಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net