ರುಚಿಯಾಗಿದೆ ಎಂದು ಮುಗಿಬಿದ್ದು ತಿಂತಿದ್ರು; ಪಾನಿಪೂರಿಗೆ ಬೆರೆಸಿದ್ದು ಬಚ್ಚಲ ನೀರಂತ ಗೊತ್ತಾಯ್ತು, ಅಷ್ಟೇ...

Collage 1
Published on

ಮುಂಬೈ: ಬೀದಿಬದಿಯ ಪಾನಿಪೂರಿ ಅಂಗಡಿಗಳ ಪಾನಿ ಹಾಗೂ ಪೂರಿ ತಯಾರಿಸುವ ರಹಸ್ಯ ಬಯಲಾಗುತ್ತಿರುವುದು ಇದೇ ಮೊದಲೇನಲ್ಲ. ಕಾಲಿನಿಂದ ತುಳಿದು ಹಿಟ್ಟು ನಾದಿ ಪೂರಿ ತಯಾರಿಸುವ, ಕೊಳಕು ನೀರಿನಿಂದ ಪಾನಿ ತಯಾರಿಸುವ ಪ್ರಕರಣಗಳು ವಿಡಿಯೋ ಸಮೇತ ಹಲವಾರು ಬಾರಿ ಬಯಲಾಗಿವೆ. ಆ ಸಾಲಿಗೆ ಈಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ.

ಈ ಪಾನಿಪೂರಿ ಅಂಗಡಿ ಮುಂದೆ ದಿನಾ ಜನ ಮುಗಿಬಿದ್ದು ಪಾನಿಪೂರಿ ಸೇವಿಸುತ್ತಿದ್ದರು. ರುಚಿಯಾಗಿದೆ ಎಂದು ಚಪ್ಪರಿಸಿ ತಿನ್ನುತ್ತಿದ್ದ ಚಾಟ್​​ಪ್ರಿಯರಿಗೆ ಇತ್ತೀಚೆಗೆ ಒಂದು ದಿನ ಆಘಾತ ಕಾದಿತ್ತು. ಇದೇ ಪಾನಿಪೂರಿ ಅಂಗಡಿಯವ ಪಾನಿ ತಯಾರಿಕೆಗೆ ಸಾರ್ವಜನಿಕ ಶೌಚಾಲಯದ ನೀರನ್ನು ಬಳಸುತ್ತಿದ್ದ ವಿಡಿಯೋ ತುಣುಕು ಹರಿದಾಡಿತ್ತು. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಅಂಗಡಿ ಮುಂದೆ ಗಲಾಟೆ ಮಾಡಿದ್ದಲ್ಲದೆ, ಅಲ್ಲಿದ್ದದ್ದನ್ನೆಲ್ಲ ಚೆಲ್ಲಾಡಿ, ಗಾಡಿ ಅಂಗಡಿಯನ್ನೂ ಜಖಂಗೊಳಿಸಿದ್ದಾರೆ.

'ಮುಂಬೈ ಕೆ ಸ್ಪೆಷಲ್ ಪಾನಿಪೂರಿ ವಾಲಾ' ಎಂಬ ಎಂಬ ಹೆಸರಿನ ಈ ಬೀದಿಬದಿ ಪಾನಿಪೂರಿ ಅಂಗಡಿಯ ಕೊಲ್ಹಾಪುರದ ರಂಕಾಲ ಕೆರೆ ಪಕ್ಕ ದಿನಾಲೂ ವ್ಯಾಪಾರ ನಡೆಸುತ್ತಿತ್ತು. ಈ ಅಂಗಡಿ ಮುಂದೆ ಪಾನಿಪೂರಿ ತಿನ್ನಲು ನಿತ್ಯ ಜನಜಂಗುಳಿ ಇರುತ್ತಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net