ಉಸಿರುಗಟ್ಟುತ್ತಿದ್ದ 8 ವರ್ಷದ ಬಾಲಕಿ: ಪುರುಷರ ಗುಂಪಿನ ತಕ್ಷಣ ಕ್ರಿಯೆಯಿಂದ ರಕ್ಷಣೆ! ವಿಡಿಯೋ ವೈರಲ್ | Chewing Gum

untitled-design-2025-09-19t164717931-68cd3bca62998
Published on

Chewing Gum: ಕೇರಳದ ಕಣ್ಣೂರಿನ ಪಲ್ಲಿಕ್ಕ ಗ್ರಾಮದಲ್ಲಿ ಹುಡುಗಿಯೊಬ್ಬಳು ಚೂಯಿಂಗ್​ ಗಮ್​ ತಿಂದ ನಂತರ ಆಕೆಯ ಉಸಿರಾಟ ಕ್ರಿಯೆಯಲ್ಲಿ ತೊಂದರೆ ಉಂಟಾಗಿದ್ದು, ಈ ವೇಳೆ ಆ ರಸ್ತೆಯಲ್ಲೇ ನಿಂತಿದ್ದ, ಬಾಲಕರ ಗುಂಪೊಂದು ಆಕೆಯನ್ನು ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ಸಾಮಾಜಿಕ ಜಲತಾಣಗಳಲ್ಲಿ ಈಗಾಗಲೇ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಜನನಿಬಿಡ ರಸ್ತೆಯಲ್ಲಿ ತನ್ನ ಸೈಕಲ್​ ಸವಾರಿ ಮಾಡಲು ಸಿದ್ಧವಾಗುತ್ತಿರುವುದನ್ನು ಈ ವಿಡಿಯೋ ತೋರಿಸಿದೆ. ಈ ಸಮಯದಲ್ಲಿ ಯುವಕರ ಗುಂಪೊಂದು ಮಾತನಾಡುತ್ತಿರುವುದನ್ನು ಸಹ ನೋಡಬಹುದಾಗಿದೆ. ಇದ್ದಕ್ಕಿಂದತಲೇ, ಹುಡುಗಿಗೆ ಗಂಟಲಲ್ಲಿ ಅಸ್ವಸ್ಥೆತೆ ಉಂಟಾಗಿದ್ದು, ಚೂಯಿಂಗ್​ ಗಮ್​ನಿಂದಲೇ ಈ ಅನುಭವವಾಗುತ್ತಿದೆ ಎಂದು ಅರಿತುಕೊಂಡ ಈಕೆ ತಕ್ಷಣವೇ ಈ ಪುರುಷರ ಗುಂಪಿನ ಬಳಿ ಹೋಗಿ ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಅವಳಿಗೆ ಸಹಾಯ ಮಾಡಿ, ಅವಳ ಜೀವವನ್ನು ರಕ್ಷಿಸಿರುವುದನ್ನು ಈ ವಿಡಿಯೋ ತೋರಿಸಿದೆ.

An eight-year-old child in Pallikkara,#Kannur was saved by a group of young men after she began choking on #ChewingGum. The child approached them feeling unwell, and they quickly helped her expel the gum. Their timely action is now being praised across social media... pic.twitter.com/MSCSvxlZJw

— Yasir Mushtaq (@path2shah) September 18, 2025

ಈ ವಿಡಿಯೋವನ್ನು @path2shah ಎಂಬ X ಬಳಕೆದಾರರು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕಣ್ಣೂರಿನ ಪಲ್ಲಿಕ್ಕರದಲ್ಲಿ ಎಂಟು ವರ್ಷದ ಮಗುವೊಂದು #ಚೂಯಿಂಗ್‌ಗಮ್ ಸೇವಿಸಿ ಉಸಿರುಗಟ್ಟಿಸಲು ಪ್ರಾರಂಭಿಸಿದಾಗ ಯುವಕರ ಗುಂಪೊಂದು ಮಗುವನ್ನು ರಕ್ಷಿಸಿತು ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಒಬ್ಬ ಎಕ್ಸ್​ ಬಳಕೆದಾರ ಸುಂದರ! ಹೆಚ್ಚಿನ ಜನರು ಹೃದಯದಲ್ಲಿ ಕೆಟ್ಟವರಲ್ಲ ಎಂದು ತೋರಿಸುತ್ತದೆ. ಅವರು ಜಾತಿ ಧರ್ಮ ಎನ್ನದೇ ಸಹಾಯ ಮಾಡಲು ಸಿದ್ಧರಿದ್ದಾರೆ. ನಮ್ಮ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಈ ಕಥೆ ನನ್ನ ಹೃದಯವನ್ನು ತುಂಬಾ ಬೆಚ್ಚಗಾಗಿಸಿತು! ದೈನಂದಿನ ಧೈರ್ಯ ಮತ್ತು ತ್ವರಿತ ಕ್ರಿಯೆಯ ಕ್ಷಣಗಳು ಬಹಳ ಮುಖ್ಯ. ಗಂಭೀರವಾಗಿ, ಅವರಿಗೆ ಹ್ಯಾಟ್ಸ್ ಆಫ್! ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net