ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು

rajyasabha mp's protesting
Published on

ನವದೆಹಲಿ: ದುರ್ವರ್ತನೆ ತೋರಿದ ರಾಜ್ಯಸಭೆಯ ಎಂಟು ಸದಸ್ಯರನ್ನು ನಿನ್ನೆ ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿದ್ದರು. ಆದಾಗ್ಯು, ಸದನದಿಂದ ಹೊರನಡೆಯದೇ ಒಳಗೇ ನಿಂತು ಗದ್ದಲ ಎಬ್ಬಿಸಿದ 8 ಸದಸ್ಯರು ಬಳಿಕ ನಿನ್ನೆ ರಾತ್ರಿಯೂ ಸದನದ ಹೊರಗೆ ಧರಣಿ ಮುಂದುವರಿಸಿದ್ದರು.

ಪ್ರತಿಭಟನಾ ನಿರತ ಸದಸ್ಯರಿಗೆ ಬೆಂಬಲ ಸೂಚಿಸುವ ಸಲುವಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್​, ಕಾಂಗ್ರೆಸ್​ನ ಅಹ್ಮದ್ ಪಟೇಲ್, ಎನ್​ಸಿಪಿಯ ಪ್ರಫುಲ್ಲ ಪಟೇಲ್​ ಕೂಡ ಜತೆಗೂಡಿದ್ದರು. ಇನ್ನೋರ್ವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸುಮಾರು ನಾಲ್ಕು ಗಂಟೆ ಕಾಲ ಪ್ರತಿಭಟನಾನಿರತರೊಂದಿಗೆ ತಾವೂ ಕುಳಿತಿದ್ದರು.

ಪ್ರತಿಭಟನಾನಿರತ ಸದಸ್ಯರು ರಾತ್ರಿ ಇಡೀ ದೇಶಭಕ್ತಿ ಗೀತೆ ಹೇಳುತ್ತ, ಘೋಷಣೆ ಕೂಗುತ್ತಿದ್ದುದಾಗಿ ಅಮಾನತುಗೊಂಡಿರುವ ಸದಸ್ಯರೊಬ್ಬರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಬತ್ತಿ, ಆಂಬುಲೆನ್ಸ್ ಸೇವೆ ಲಭ್ಯವಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net