ಎಂಟು ಚಿತ್ರಗಳು ಬಿಡುಗಡೆಗೆ ಸಿದ್ಧ; ರಾಕುಲ್​ಗೆ 2022 ನಿರ್ಣಾಯಕ ವರ್ಷ

Rakul
Published on

ಕರೊನಾ ಮತ್ತು ಲಾಕ್​ಡೌನ್ ನಡುವೆಯೂ ರಾಕುಲ್ ಪ್ರೀತ್ ಸಿಂಗ್ ಕಳೆದೆರಡು ವರ್ಷ ಬಹಳ ಬ್ಯುಸಿಯಾಗಿದ್ದರು. ಹೈದರಾಬಾದ್​ನಿಂದ ಮುಂಬೈಗೆ, ಮುಂಬೈನಿಂದ ಚೆನ್ನೈಗೆ ಅಂತ ಓಡಾಡುತ್ತಿದ್ದರು. ರಾಕುಲ್ ನಟನೆಯಲ್ಲೇನೋ ಬಿಜಿಯಾಗಿದ್ದಾರೆ, ಆ ಚಿತ್ರಗಳು ಬಿಡುಗಡೆ ಆಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಕೊನೆಗೂ ಉತ್ತರ ಸಿಕ್ಕಿದೆ. ಈ ವರ್ಷ ರಾಕುಲ್ ಅಭಿನಯದ ಎಂಟು ಚಿತ್ರಗಳು ಬಿಡುಗಡೆಯಾಗುವುದಕ್ಕಿದೆ ಎಂದರೆ ನೀವು ನಂಬಬೇಕು.

ಕಳೆದೆರಡು ವರ್ಷಗಳಿಂದ ರಾಕುಲ್ ನಟಿಸಿದ ಚಿತ್ರಗಳೆಲ್ಲವೂ ಇದೀಗ ಮುಗಿದಿದ್ದು, ಬಿಡುಗಡೆಯಾಗುವುದಕ್ಕೆ ತಯಾರಿ ನಡೆಸಿವೆ. ಅದರಲ್ಲಿ ಆರು ಹಿಂದಿ ಮತ್ತು ಎರಡು ತಮಿಳು ಚಿತ್ರಗಳಿವೆ ಎನ್ನುವುದು ಗಮನಾರ್ಹ. ಜಾನ್ ಅಬ್ರಹಾಂ ಅಭಿನಯದ ‘ಅಟ್ಯಾಕ್’, ಅಜಯ್ ದೇವಗನ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ‘ರನ್ವೇ 34’, ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ‘ಥ್ಯಾಂಕ್ ಗಾಡ್’, ಆಯುಷ್ಮಾನ್ ಖುರಾನಾ ನಟನೆಯ ‘ಡಾಕ್ಟರ್ ಜಿ’, ಅಕ್ಷಯ್ ಕುಮಾರ್ ಅಭಿನಯದ ‘ಸಿಂಡ್ರೆಲಾ’ ಮತ್ತು ‘ಛತ್ರಿವಾಲಿ’ ಎಂಬ ಚಿತ್ರಗಳು ಹಿಂದಿಯದ್ದಾದರೆ, ತಮಿಳಿನಿಂದ ‘31 ಅಕ್ಟೋಬರ್ - ಲೇಡೀಸ್ ನೈಟ್’ ಮತ್ತು ‘ಅಯಾಲನ್’ ಚಿತ್ರಗಳಿವೆ.

ಈ ಎಂಟೂ ಚಿತ್ರಗಳಲ್ಲಿ ರಾಕುಲ್​ಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಿದ್ದು, ಈ ಎಲ್ಲ ಚಿತ್ರಗಳ ಬಗ್ಗೆಯೂ ಆಕೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಏಪ್ರಿಲ್ ನಂತರ ಈ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗುವ ನಿರೀಕ್ಷೆ ಇವೆ. ಈ ಮಧ್ಯೆ ರಾಕುಲ್ ಸದ್ಯದಲ್ಲೇ ಇನ್ನೊಂದಿಷ್ಟು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net