More

    ಪ್ರೀತಿಸುವ ಸೋಗಿನಲ್ಲಿ ವಿವಾಹಿತನಿಂದ ಯುವತಿಗೆ 8.48 ಲಕ್ಷ ರೂ. ವಂಚನೆ

    ಬೆಂಗಳೂರು: ಪ್ರೀತಿಸುವ ಸೋಗಿನಲ್ಲಿ ಸಹೋದ್ಯೋಗಿ ಯುವತಿ ಜತೆ ಸಲುಗೆ ಬೆಳೆಸಿದ್ದ ವಿವಾಹಿತ ವ್ಯಕ್ತಿ, ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿ 8.48 ಲಕ್ಷ ರೂ. ಪಡೆದು ವಂಚಿಸಿದ್ದಾನೆ.

    ಕಾಚರಕನಹಳ್ಳಿಯ ಅಂಜಿನಪ್ಪ ಲೇಔಟ್ ನಿವಾಸಿ 27 ವರ್ಷದ ಯುವತಿ ಸಂತ್ರಸ್ತೆ. ಈ ಕುರಿತು ಆಕೆ ಕೊಟ್ಟ ದೂರಿನ ಮೇರೆಗೆ ವಿಜ್ಞಾನನಗರ ನಿವಾಸಿ ಶ್ಯಾಮ್ ಶ್ರೀನಿವಾಸ್ ಎಂಬಾತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಆರೋಪದ ಅಡಿ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಯುವತಿ ಎರಡು ವರ್ಷದ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶ್ಯಾಮ್ ಶ್ರೀನಿವಾಸ್ ಎಂಬಾತನ ಪರಿಚಯವಾಗಿತ್ತು. ಈ ವೇಳೆ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಮನೆಯಿಂದ ಕಂಪನಿಗೆ ಕರೆದೊಯ್ಯುತ್ತಿದ್ದ. ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಅಣ್ಣನ ಮದುವೆ ಇದೆ. ಖರ್ಚಿಗೆ ಹಣ ಬೇಕು ಎಂದು ಹೇಳಿ ಹಂತಹಂತವಾಗಿ 8.48 ಲಕ್ಷ ರೂ. ಪಡೆದುಕೊಂಡಿದ್ದಾನೆ. ಆತನಿಗೆ ಮದುವೆ ಯಾಗಿರುವ ವಿಚಾರ ಯುವತಿಗೆ ಗೊತ್ತಾಗಿದ್ದು, ಕ್ರಮ ಕೈಗೊಳ್ಳುವಂತೆ ಆರೋಪಿಸಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಫೈನಾನ್ಸ್ ಪಂಗನಾಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts