

ನವದೆಹಲಿ : ಕರೊನಾ ಎರಡನೇ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕರೊನಾ ಲಸಿಕಾ ಅಭಿಯಾನವನ್ನು ಸಮರ್ಪಕವಾಗಿ ಮತ್ತು ತ್ವರಿತವಾಗಿ ನಡೆಸಬೇಕೆಂಬ ಪ್ರಯತ್ನ ಸಾಗುತ್ತಿದೆ. ಈವರೆಗೆ 6.3 ಕೋಟಿ ಮೊದಲನೇ ಡೋಸ್ ಮತ್ತು 1 ಕೋಟಿ ಎರಡನೇ ಡೋಸ್ಗಳನ್ನು ನೀಡಲಾಗಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವದೇಕರ್ ಹೇಳಿದ್ದಾರೆ.
"ಭಾರತದಲ್ಲಿ 45 ವರ್ಷ ಮೇಲ್ಪಟ್ಟವರೆಲ್ಲರಿಗೆ ಕರೊನಾ ಲಸಿಕೆ ತೆಗೆದುಕೊಳ್ಳಲು ಅವಕಾಶ ಒದಗಿಸಿರುವುದನ್ನು ಜನರು ಸ್ವಾಗತಿಸಿದ್ದಾರೆ. ಒಟ್ಟು 7 ಕೋಟಿ ಡೋಸ್ಗಳನ್ನು ನೀಡಿರುವ ದಾಖಲೆ ಸಾಧಿಸಲಾಗಿದೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಜೊತೆಗೆ 70 ಮಿಲಿಯನ್(7 ಕೋಟಿ) ಮೀರಿದ ಲಸಿಕೆ ಡೋಸ್ಗಳನ್ನು ನೀಡಲಾಗಿರುವುದಕ್ಕೆ ಪ್ರಧಾನಿ ಮೋದಿ ಶುಭ ಕೋರಿರುವ ಪೋಸ್ಟರ್ಅನ್ನೂ ಶೇರ್ ಮಾಡಿದ್ದಾರೆ. (ಏಜೆನ್ಸೀಸ್)