VIDEO: ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ತವರಲ್ಲಿ ದಾಖಲೆ ಎತ್ತರದ ವರ್ಣಚಿತ್ರ ರಚನೆ

messi web
Published on

ರೊಸಾರಿಯೊ: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ ದಾಖಲೆಯ 69 ಮೀಟರ್ ಎತ್ತರದ ಭಿತ್ತಿಚಿತ್ರದೊಂದಿಗೆ ತವರು ನಗರ ರೊಸಾರಿಯೊದಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ.

ಕಟ್ಟಡವೊಂದರ ಗೋಡೆಯ ಮೇಲಿನ ಈ ಬೃಹತ್ ವರ್ಣಚಿತ್ರವನ್ನು ಸ್ಥಳೀಯ ಕಲಾವಿದರಾದ ಮಾರ್ಲೆನ್ ಜುರಿಯಗಾ ಮತ್ತು ಲಿಸಾಂಡ್ರೊ ಉರ್ಟೆಗಾ ರಚಿಸಿದ್ದಾರೆ. 34 ವರ್ಷದ ಮೆಸ್ಸಿ ಅರ್ಜೆಂಟೀನಾ 10 ನಂಬರ್ ಜೆರ್ಸಿ ಧರಿಸಿ ಎದೆ ಮುಟ್ಟಿಕೊಂಡಂತಿರುವ ಚಿತ್ರ ಇದಾಗಿದೆ.

ಸದ್ಯ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಆಟಗಾರರಾಗಿರುವ ಮೆಸ್ಸಿ, 6ನೇ ವಯಸ್ಸಿನಲ್ಲಿ ಸ್ಥಳೀಯ ಕ್ಲಬ್ ಗ್ರಾಂಡೊಲಿ ಪರ ಫುಟ್‌ಬಾಲ್ ಕಲಿಕೆ ಆರಂಭಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net