More

    ಲಬುಶೇನ್‌ಗೆ ಜೀವದಾನಗಳ ಭರ್ಜರಿ ಲಾಭ, ಆಸೀಸ್ ಹಿಡಿತದಲ್ಲಿ ಇಂಗ್ಲೆಂಡ್

    ಅಡಿಲೇಡ್: ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಬಳಿಕ ಬೌಲಿಂಗ್‌ನಲ್ಲೂ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಮೇಲೆ ಬಿಗಿಹಿಡಿತ ಸಾಧಿಸಿದೆ. ಈ ಮೂಲಕ ಅಹರ್ನಿಶಿ ಟೆಸ್ಟ್‌ನಲ್ಲಿ ಸತತ 9ನೇ ಜಯದತ್ತ ಹೆಜ್ಜೆಇಟ್ಟಿದೆ.

    ಶುಕ್ರವಾರ 2 ವಿಕೆಟ್‌ಗೆ 221 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಆಸೀಸ್, ಮಾರ್ನಸ್ ಲಬುಶೇನ್ (103 ರನ್, 305 ಎಸೆತ, 8 ಬೌಂಡರಿ) ಶತಕ ಮತ್ತು ಹಂಗಾಮಿ ನಾಯಕ ಸ್ಟೀವನ್ ಸ್ಮಿತ್ (93 ರನ್, 201 ಎಸೆತ, 12 ಬೌಂಡರಿ, 1 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್‌ನಿಂದ 9 ವಿಕೆಟ್‌ಗೆ 473 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರತಿಯಾಗಿ ಇಂಗ್ಲೆಂಡ್ 2 ವಿಕೆಟ್‌ಗೆ 17 ರನ್ ಗಳಿಸಿ ಸಂಕಷ್ಟದಲ್ಲಿದೆ. ಆಂಗ್ಲರು ಆರಂಭಿಕ ಆಘಾತ ಎದುರಿಸಿದ ಬೆನ್ನಲ್ಲೇ ಮಳೆಯಿಂದಾಗಿ ದಿನದಾಟ ಸ್ವಲ್ಪ ಬೇಗನೆ ಮುಕ್ತಾಯಗೊಂಡಿತು. ಡೇವಿಡ್ ಮಲಾನ್ (1*) ಜತೆಗೆ ನಾಯಕ ಜೋ ರೂಟ್ (5*) ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನೂ 257 ರನ್ ಗಳಿಸಬೇಕಾಗಿದೆ.

    ಲಬುಶೇನ್‌ಗೆ ಜೀವದಾನಗಳ ಲಾಭ
    ಟೆಸ್ಟ್ ಕ್ರಿಕೆಟ್‌ನಲ್ಲಿ 6ನೇ ಮತ್ತು ಆಶಸ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಆಸೀಸ್ ಬ್ಯಾಟರ್ ಮಾರ್ನಸ್ ಲಬುಶೇನ್ ಹಲವು ಜೀವದಾನಗಳ ಲಾಭ ಪಡೆದರು. 34 ಇನಿಂಗ್ಸ್‌ಗಳಲ್ಲೇ 2 ಸಾವಿರ ರನ್ ಪೂರೈಸಿದ 27 ವರ್ಷದ ಲಬುಶೇನ್, ಅವರ 3 ಕ್ಯಾಚ್ ಕೈಚೆಲ್ಲಲಾಗಿತ್ತು. ಇನ್ನೊಮ್ಮೆ ರಾಬಿನ್‌ಸನ್ ಎಸೆತದಲ್ಲಿ ಅವರ ಕ್ಯಾಚ್ ಹಿಡಿದಿದ್ದರೂ ಅದು ನೋಬಾಲ್ ಆಗಿತ್ತು. ಅಂತಿಮವಾಗಿ ರಾಬಿನ್‌ಸನ್ ಎಸೆತದಲ್ಲೇ ಲಬುಶೇನ್ ಎಲ್‌ಬಿ ಬಲೆಗೆ ಬಿದ್ದರು. ಮಾರ್ನಸ್ ಲಬುಶೇನ್ ಅಹರ್ನಿಶಿ ಟೆಸ್ಟ್‌ನಲ್ಲಿ 3 ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿದರು.

    ಆಸ್ಟ್ರೇಲಿಯಾ: 9 ವಿಕೆಟ್‌ಗೆ 473 ಡಿಕ್ಲೇರ್ (ಲಬುಶೇನ್ 103, ಸ್ಮಿತ್ 93, ಕ್ಯಾರಿ 51, ಸಾರ್ಕ್ 39*, ನೇಸರ್ 35, ಸ್ಟೋಕ್ಸ್ 113ಕ್ಕೆ 3, ಆಂಡರ್‌ಸನ್ 58ಕ್ಕೆ 2). ಇಂಗ್ಲೆಂಡ್: 2 ವಿಕೆಟ್‌ಗೆ 17 (ಹಮೀದ್ 6, ಬರ್ನ್ಸ್ 4, ಮಲಾನ್ 1*, ರೂಟ್ 5*, ಸ್ಟಾರ್ಕ್ 11ಕ್ಕೆ 1, ನೇಸರ್ 4ಕ್ಕೆ 1).

    ವಿರಾಟ್​ ಕೊಹ್ಲಿ ವಿರುದ್ಧ ಬಿಸಿಸಿಐ ಶಿಸ್ತುಕ್ರಮ? ಟೆಸ್ಟ್ ನಾಯಕತ್ವವೂ ಕೈಜಾರುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts