More

    ಮೂರು ಸಾವಿರ ಸರ್ಪಗಳಿಗೆ ಜೀವದಾನ!

    ಬೋರಗಾಂವ: ಹಾವು ಕಂಡರೆ ಭಯ ಬಿದ್ದು ಓಡುವವರು ಒಂದು ಕಡೆಯಾದರೆ, ಹಾವು ಕಂಡ ತಕ್ಷಣ ಅದನ್ನು ಹೊಡೆಯಲು ಯತ್ನಿಸುವವರು ಇನ್ನೊಂದು ಕಡೆ. ಇದರ ನಡುವೆ ಹಾವು ಕಂಡ ತಕ್ಷಣ ಅದನ್ನು ಹಿಡಿದು ಸುರತವಾಗಿ ಕಾಡಿನಲ್ಲಿ ಬಿಡುವ ಪಟ್ಟಣದ ಯುವಕ ಪ್ರವಿಣ ನರವಾಡೆ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

    ಸಮಾಜದಲ್ಲಿ ವಿವಿಧ ಹವ್ಯಾಸ ಬೆಳೆಸಿಕೊಂಡವರಿದ್ದಾರೆ. ಆದರೆ, ತಮ್ಮ ಕಾರ್ಯದಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆಯಿಂದ ಪ್ರವಿಣ ಕಾಲೇಜಿನಲ್ಲಿ ಆಟ ಆಡುವಾಗ ಶಾಲಾ ಆವರಣದಲ್ಲಿ ಬಂದಿದ್ದ ಹಾವು ಹಿಡಿದಿದ್ದರು. ಮೊದಲ ಬಾರಿಗೆ ಹಾವು ಹಿಡಿದು ರ್ನಿಜನ ಪ್ರದೇಶದಲ್ಲಿ ಬಿಟ್ಟಿದ್ದರು. ಆಗಿನಿಂದ ಇಲ್ಲಿಯವರೆಗೂ ಹಾವು ಕಂಡರೆ ಅವುಗಳನ್ನು ಹಿಡಿದು ಜೀವದಾನ ಮಾಡಿದ್ದಾರೆ.

    ಕಳೆದ 6 ವರ್ಷಗಳಲ್ಲಿ ಪಟ್ಟಣ ಸೇರಿದಂತೆ ಸುತ್ತಲು 3 ಸಾವಿರ ಹಾವು ರಕ್ಷಿಸಿದ ಪ್ರವಿಣ ಹಾವುಗಳನ್ನು ಕೊಲ್ಲದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿವಿಧ ಭಾಗಗಳಿಂದ ಹಿಡಿದ ವಿಷಕಾರಿ ಹಾಗೂ ವಿಷರಹಿತ ಸರ್ಪಗಳನ್ನು ಸಮೀಪದ ಅರಣ್ಯಗಳಲ್ಲಿ ಹಾಗೂ ರ್ನಿಜನ ಪ್ರದೇಶಗಳಲ್ಲಿ ಬಿಟ್ಟು ಅವುಗಳಿಗೆ ಜೀವದಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕಾಳಿಂಗ, ನಾಗ, ಅಜಗರ, ಟಸ್ಕರ್​, ಬೀವಡ, ಗುಣಕ, ಮನಿಯಾರ್​, ೂಣಸ್​ ಸೇರಿ ವಿವಿಧ ಜಾತಿಯ ಹಾವು ಹಿಡಿದಿದ್ದಾರೆ. ಹಾವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ.

    ಹಾವುಗಳು ಸುಮ್ಮನೆ ಯಾರಿಗೂ ಕಚ್ಚುವುದಿಲ್ಲ. ಅವುಗಳಿಗೆ ತೊಂದರೆ ಮಾಡಿದರೆ ಮಾತ್ರ ಅವು ಕಚ್ಚುತ್ತವೆ. ಎಲ್ಲ ಹಾವುಗಳು ವಿಷಕಾರಿಯಲ್ಲ. ಹಾವು ಕಂಡರೆ ರಕ್ಷಿಸಿ. ತೊಂದರೆ ಕೊಡಬೇಡಿ.
    | ಪ್ರವಿಣ ನರವಾಡೆ ಉರಗ ಪ್ರೇಮಿ

    | ಸುಯೋಗ ಕಿಲ್ಲೇದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts