

ಲಲಿತ್ಪುರ: ಇದೊಂದು ಅಮಾನವೀಯ ಘಟನೆ. 65 ವರ್ಷದ ದಲಿತ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ, ಬಲವಂತವಾಗಿ ಮೂತ್ರ ಕುಡಿಸಲಾಗಿದೆ. ಅವರ ಮಗನ ಮೇಲೆಯೂ ಹಲ್ಲೆ ನಡೆದಿದೆ.
ಉತ್ತರ ಪ್ರದೇಶದ ಲಲಿತ್ಪುರ ಜಿಲ್ಲೆಯಲ್ಲಿ ಘಟನೆ ನಡೆದಿದೆ. ವೃದ್ಧ ಅಮರ್ ಎಂಬುವರಿಗೆ ಅದೇ ಗ್ರಾಮದ ಕೆಲವರು ಸೇರಿ ಸಿಕ್ಕಾಪಟೆ ಹೊಡೆದಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಮರ್ ಅವರ ಪುತ್ರನಿಗೆ ಸೋನು ಯಾದವ್ ಎಂಬಾತ ಕೊಡಲಿಯಿಂದ ಹೊಡೆದಿದ್ದ. ಹಾಗಾಗಿ ಅಮರ್ ಕುಟುಂಬದವರು ಸೋನು ಯಾದವ್ ಮತ್ತಿತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅಂದಿನಿಂದಲೂ ಸೋನು ಯಾದವ್ ಇವರ ಬಳಿ ಬಂದು ದೂರು ವಾಪಸ್ ತೆಗೆದುಕೊಳ್ಳಿ ಎಂದು ಬಲವಂತ ಮಾಡುತ್ತಿದ್ದ. ಮಂಗಳವಾರ ಅಮರ್ ಬಳಿ ಬಂದು ಗಲಾಟೆ ಮಾಡಿದ್ದಲ್ಲದೆ, ಮೂತ್ರ ಕುಡಿಯುವಂತೆ ಬಲವಂತ ಮಾಡಿದರು. ವೃದ್ಧ ಅದನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ‘ಆಗ ಸಫರ್ ಆಗೋ ಜೋಕರ್ ನೀವೇ..’; ನಟ ರಮೇಶ್ ಅರವಿಂದ್ ‘ಗುರಿ’ ಇಟ್ಟು ಹೇಳಿದ್ದು ಯಾರಿಗೆ?
ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)