ಬ್ರೆಜಿಲ್: ಭೀಕರ ವಿಮಾನ ಅಪಘಾತ ಸಂಭವಿಸಿದೆ. ಸಾವೊ ಪಾಲೊದ ವಿನ್ಹೆಡೊದಲ್ಲಿ ವಿಮಾನವೊಂದು ಪತನಗೊಂಡಿತು, ಅದರಲ್ಲಿದ್ದ ಎಲ್ಲಾ 62 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪ್ರಾದೇಶಿಕ ವಾಹಕ ವೊಪಾಸ್‌ಗೆ ಸೇರಿದ ವಿಮಾನವು ಆಗಸ್ಟ್ 9 ರಂದು, ಸ್ಥಳೀಯ ಕಾಲಮಾನ ಮಧ್ಯಾಹ್ನ 1:30 ರ ಸುಮಾರಿಗೆ ಪರಾನಾದಿಂದ ಸಾವೊ ಪಾಲೊ ಗೌರುಲ್ಹೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಿನ್ಹೆಡೊ ನಗರದ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು ವಿಮಾನದಲ್ಲಿ 62 ಜನರು ಸಾವನ್ನಪ್ಪಿದ್ದಾರೆ.
58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಜನವಸತಿ ಪ್ರದೇಶಕ್ಕೆ ಪತನಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಸ್ಥಳೀಯ ನಿವಾಸಿಗಳು ಗಾಯಗೊಂಡಿಲ್ಲ . ವಿಮಾನ ಅಪಘಾತದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ ಎಂದು ಬ್ರೆಜಿಲ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.