More

    ವರದಿ: ಹಬ್ಬದ ಸೀಸನ್‌ಗೆ ಮುನ್ನ ಮಹಿಳಾ ಅರ್ಜಿದಾರರಲ್ಲಿ 61% ಹೆಚ್ಚಳ

    ನವದೆಹಲಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಬ್ಬದ ಸೀಸನ್‌ಗೆ ಮುಂಚಿತವಾಗಿ ಈ ವರ್ಷ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಮಹಿಳಾ ಅರ್ಜಿದಾರರಲ್ಲಿ ಭಾರತವು ಶೇ. 61 ರಷ್ಟು ಗಮನಾರ್ಹ ಹೆಚ್ಚಳ ಕಂಡಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.

    ಪ್ರಮುಖ ಉದ್ಯೋಗಗಳು ಮತ್ತು ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ apna.co ಪ್ರಕಾರ, ಮಹಿಳಾ ಅರ್ಜಿದಾರರ ಹೆಚ್ಚಳವು ಉದ್ಯಮಗಳಾದ್ಯಂತ ಮಹಿಳಾ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ. ಏಕೆಂದರೆ ಕಂಪನಿಗಳು ಹಬ್ಬದ ಸೀಸನ್​​​​ನಲ್ಲಿ ಹೆಚ್ಚಿನ ಚಟುವಟಿಕೆಯನ್ನು ಹೊಂದಿರುತ್ತವೆ. ವಿಶೇಷವಾಗಿ ಇ-ಕಾಮರ್ಸ್, ಚಿಲ್ಲರೆ ಮತ್ತು ಆತಿಥ್ಯ ಮುಂತಾದ ಕ್ಷೇತ್ರಗಳಲ್ಲಿ.

    ಒಳನೋಟಗಳ ಪ್ರಕಾರ, ಉದ್ಯೋಗ ಮಾರುಕಟ್ಟೆಯನ್ನು ಗಮನಿಸುವುದಾದರೆ 2022 ರಿಂದ 2023 ರವರೆಗೆ ಗಮನಾರ್ಹವಾದ ರೂಪಾಂತರ ಕಂಡಿದೆ. ವಿಶೇಷವಾಗಿ ಟೆಲಿಕಾಲಿಂಗ್, ಅಕೌಂಟ್ಸ್, ವ್ಯಾಪಾರ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಡೆಲಿವರಿ ಉದ್ಯೋಗ ವಿಭಾಗಗಳಲ್ಲಿ.

    ಹಬ್ಬದ ಸೀಸನ್​​​​​ನಲ್ಲಿ ಪ್ರಮುಖ ಕಂಪನಿಗಳಿಂದ ಸಕ್ರಿಯ ಭಾಗವಹಿಸುವಿಕೆ ಕಂಡುಬಂದಿದೆ. ಅವರು ಉನ್ನತ ಪ್ರತಿಭೆಗಳಿಗೆ ಆಕರ್ಷಕ ಪ್ರೋತ್ಸಾಹವನ್ನು ಸಹ ನೀಡಿದ್ದಾರೆ.

    ಇದಲ್ಲದೆ, ಭಾರತದ ಪ್ರಮುಖ ನಗರಗಳಲ್ಲಿ 2023 ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 1.2 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ದಾಖಲಾಗಿವೆ ಎಂದು ವರದಿಯು ತೋರಿಸಿದೆ. ಇದು ಹಬ್ಬದ ಸೀಸನ್‌ಗೆ ಮುಂಚಿತವಾಗಿ ನೇಮಕಾತಿ ಬೇಡಿಕೆಯಲ್ಲಿನ ಉಲ್ಬಣವನ್ನು ಪ್ರತಿಬಿಂಬಿಸುತ್ತದೆ.

    ನಗರವಾರು ಉದ್ಯೋಗಗಳ ಬೇಡಿಕೆ ನೋಡುವುದಾದರೆ ದೆಹಲಿಯಲ್ಲಿ, ಸೇಲ್ಸ್​​​​ ಮತ್ತು ಮಾರ್ಕೆಟಿಂಗ್, ಕಸ್ಟಮರ್​​​​ ಸಪೋರ್ಟ್ ಮತ್ತು ಸೇಲ್ಸ್​​​​ ಮತ್ತು ಅಕೌಂಟಿಂಗ್ ಟೆಕ್ನಿಶಿಯನ್ ಸ್ಥಾನಗಳಿಗೆ ಆದ್ಯತೆ ಇತ್ತು. ಆದರೆ ಮುಂಬೈ ಹಣಕಾಸು ಮತ್ತು ಮಾನವ ಸಂಪನ್ಮೂಲ, ಮಾರಾಟ ಮತ್ತು ಮಾರ್ಕೆಟಿಂಗ್ ಮತ್ತು ವ್ಯಾಪಾರ ಅಭಿವೃದ್ಧಿಗೆ ಹೆಚ್ಚಿನ ಬೇಡಿಕೆ ಕಂಡಿದೆ. 

    ಚಿರತೆ ನೈಟ್ ರೌಂಡ್ಸ್​​​​​​ನ ಮತ್ತೊಂದು ವಿಡಿಯೋ ಔಟ್; ಎಚ್ಚರಿಕೆ ಸಂದೇಶ ನೀಡಿದ ಅರಣ್ಯ ಇಲಾಖೆ

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts