ಹೆಬ್ರಿ: ಅಜೆಕಾರು ಸಮೀಪದ ಗುಡ್ಡೆಯಂಗಡಿ ಸೇತುವೆ ಬಳಿ ಮುದ್ರಾಡಿಯಿಂದ ಕಾರ್ಕಳ ಕಡೆಗೆ ಸಾಗುತಿದ್ದ ಕಾರು ಭಾನುವಾರ ಮುಂಜಾನೆ ಗುಡ್ಡೆಯಂಗಡಿ ಸೇತುವೆಗೆ ಡಿಕ್ಕಿ ಹೊಡೆದು 6 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕಾರು ಹುಬ್ಬಳಿಯಿಂದ ಕಾರ್ಕಳದೆಡೆಗೆ ಸಾಗುತಿತ್ತು ಎನ್ನಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ ಮೂಲದ ಮಂಜುನಾಥ್ ಗೌಡ(28), ಆತ್ಮಾನಂದ(24) ಹನುಮಂತ್ ಗೌಡ(23), ಹಾಲಪ್ಪ ಗೌಡ(24) ವೀರಭದ್ರ ಗೌಡ( 28) ಬಸನಗೌಡ( 27) ಗಾಯಗೊಂಡವರು. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.