

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜೀವನದಲ್ಲಿ ಔನ್ನತ್ಯ ಸಾಧಿಸಲು ಧರ್ಮಸ್ಥಳ ಯೋಜನೆಯೇ ದಾರಿ. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರನ್ನು ಒಗ್ಗೂಡಿಸುವ ಮೂಲಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ರೇಷ್ಠ ಕಾರ್ಯ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಕುಂದಾಪುರದ ಮೊಗವೀರ ಸಭಾ ಭವನದಲ್ಲಿ ಬ್ಯಾಂಕ್ ಆಫ್ ಬರೋಡಾ ಸಹಯೋಗದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಡಾ.ಬಸವರಾಜ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಕುಂದಾಪುರ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡಾ ಉಡುಪಿ ವಿಭಾಗ ಅಧಿಕಾರಿಗಳಾದ ರವೀಂದ್ರನಾಥ ಠಾಗೋರ್, ವಿನಯಾ, ಕುಂದಾಪುರ ಶಾಖಾ ವ್ಯವಸ್ಥಾಪಕ ಕನಗಾ ರತಿನಾಮ್ ಎಸ್, ಡಾ.ಬಸವರಾಜ್ ಶೆಟ್ಟಿಗಾರ್, ಪತ್ರಕರ್ತ ಯು.ಎಸ್. ಶೆಣೈ, ಪ್ರಮುಖರಾದ ನಾಗರಾಜ ಶೆಟ್ಟಿ, ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ಶಶಿಕಾಂತ, ಎ. ನಿತಿನ್, ಶ್ರೀನಿವಾಸ ನಾಯ್ಕ, ಶಿವರಾಮ ಪೂಜಾರಿ, ಶಶಿಧರ ಶೆಟ್ಟಿ ವಂಡ್ಸೆ, ಗಣೇಶ್, ಗೀತಾಂಬ ಹೆಗಡೆ, ಸ್ವಪ್ನಾ ಮೊದಲಾದವರು ಉಪಸ್ಥಿತರಿದ್ದರು. ಪಾರ್ವತಿ ಸ್ವಾಗತಿಸಿದರು. ಚಂದ್ರ ಮಧುವನ ಕಾರ್ಯಕ್ರಮ ನಿರೂಪಿಸಿದರು.