More

    5 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ 58 ವರ್ಷದ ವ್ಯಕ್ತಿ! ಇದೆಲ್ಲ ದೆವ್ವ ಮಾಡಿಸಿದ್ದು ಎಂದು ಹೇಳಿದ

    ಮುಂಬೈ: ಎರಡು ವರ್ಷಗಳ ಹಿಂದೆ ಐದು ವರ್ಷದ ಬಾಲಕನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ 58 ವರ್ಷದ ವ್ಯಕ್ತಿಗೆ ಇದೀಗ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 10 ವರ್ಷಗಳ ಜೈಲುಶಿಕ್ಷೆಯನ್ನು ಅಪರಾಧಿಗೆ ನೀಡಲಾಗಿದೆ.

    2018ರ ಏಪ್ರಿಲ್​ 4ರಂದು ಮುಂಬೈನಲ್ಲಿ ಒಬ್ಬ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ. ಆ ಸಮಯಕ್ಕೆ ಅಲ್ಲಿಗೆ ಬಂದ ಬಾಲಕನ ನೆರೆ ಮನೆಯ ವ್ಯಕ್ತಿ, ಮೊಹಮ್ಮದ್​ ಖಾತಿರ್​ ಶೇಖ್​ ಬಾಲಕನಿಗೆ 2 ರೂಪಾಯಿ ಕೊಟ್ಟು, ಗುಡಿಸಲೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕನನ್ನು ಮಲಗಿಸಿ, ಅವನ ಒಳಉಡುಪನ್ನು ತೆಗೆದಿದ್ದಾನೆ. ನಂತರ ಆತನ ಗುಪ್ತಾಂಗವನ್ನು ಮುಟ್ಟಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ದೃಶ್ಯವನ್ನು ಕಂಡು ಭಯಗೊಂಡ ಬಾಲಕ ಮನೆಗೆ ಓಡಿಬಂದಿದ್ದಾನೆ. ಏನಾಯಿತೆಂದು ಅಮ್ಮ ಕೇಳಿದರೆ ಅದಕ್ಕೆ ಉತ್ತರಿಸದೆ, ಸೀದಾ ಕೋಣೆಗೆ ಹೋಗಿ ಕುಳಿತಿದ್ದಾನೆ. ತನ್ನ ಒಳಉಡುಪನ್ನು ತೆಗೆದು ಭಯದಿಂದ ಕುಳಿತಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ತಾಯಿ ಮತ್ತೊಮ್ಮೆ ಪ್ರಶ್ನಿಸಿದಾಗ ನಡೆದ ದೃಶ್ಯವನ್ನು ವಿವರಿಸಿದ್ದಾನೆ.

    ಮಗನಿಗೆ ಈ ರೀತಿ ಕಿರುಕುಳವಾಗಿರುವುದನ್ನು ಕೇಳಿದಾಕ್ಷಣ ತಾಯಿ ಸೀದಾ ಆರೋಪಿಯ ಮನೆಗೆ ತೆರಳಿ ಪ್ರಶ್ನಿಸಿದ್ದಾಳೆ. ಆಗ ತನ್ನ ತಪ್ಪನ್ನು ಒಪ್ಪಿಕೊಂಡ ಆತ, ಇದು ನಾನು ಮಾಡಿದ್ದಲ್ಲ, ನನ್ನ ಕೈಲಿ ಯಾವುದೋ ದೆವ್ವ ಮಾಡಿಸಿದ್ದು ಎಂದು ನಾಟಕವಾಡಿದ್ದಾನೆ. ಈ ಕುರಿತಾಗಿ ಬಾಲಕನ ಕುಟುಂಬ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಇದೀಗ ಪ್ರಕರಣದ ತೀರ್ಪನ್ನು ನ್ಯಾಯಾಲಯ ನೀಡಿದೆ.

    ಅಪರಾಧಿ ಎಂದು ಸಾಬೀತಾಗಿರುವ ಖಾತಿರ್​ ಶೇಖ್​ಗೆ ಮದುವೆಯಾಗಿ ಐವರು ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ಮೂವರ ಮದುವೆಯಾಗಿದೆ. ಉಳಿದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತನ ಹೆಂಡತಿ ಬೇರೆ ಊರಲ್ಲಿ ಜೀವನ ನಡೆಸುತ್ತಿದ್ದಾಳೆ. ಆತನ ತಮ್ಮ ಕುರುಡನಾಗಿದ್ದು, ಅವನ ಜವಾಬ್ದಾರಿಯನ್ನೂ ಕುಟುಂಬವೇ ಹೊತ್ತಿದೆ. ಬಡ ಕುಟುಂಬವು ಖಾತಿರ್​ನನ್ನೇ ನಂಬಿರುವುದರಿಂದಾಗಿ ನ್ಯಾಯಾಲಯ ಶಿಕ್ಷೆಯಲ್ಲಿ ವಿನಾಯಿತಿ ನೀಡಿದೆ. (ಏಜೆನ್ಸೀಸ್​)

    ಜ್ವಾಲಾಮುಖಿಯ ಭಯದಲ್ಲೇ ಬದುಕುತ್ತಿವೆ ಇಲ್ಲಿನ ಕುಟುಂಬಗಳು! ಅತ್ಯಂತ ಭಯ ತರಿಸುವ ಈ ದ್ವೀಪ ಯಾವುದು ಗೊತ್ತೇ?

    ಹೌದು.. ಅವನೇ ಅಪರಾಧಿ; ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲಿನ 7 ವರ್ಷಗಳ ಹಿಂದಿನ ಹಲ್ಲೆ ಪ್ರಕರಣ, 3 ವರ್ಷಗಳ ಬಳಿಕ ಆರೋಪ ಸಾಬೀತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts