ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳ ಸಾವು ಪ್ರಕರಣ; ಮಾದರಾಜ ಸೇರಿದಂತೆ ಮೂವರ ಬಂಧನ | Tiger Death

ವಿಜಯವಾಣಿ - 2025-06-28T123307.871 (1)
Published on

Tigers Death: ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ತಾಯಿ ಮತ್ತು ನಾಲ್ಕು ಮರಿ ಹುಲಿಗಳ ಸಾವಿನ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಮೂವರನ್ನು ಅರಣ್ಯ ಇಲಾಖೆ‌ ದಸ್ತಗಿರಿ ಮಾಡಿದೆ. ವಿಷಪ್ರಾಶನ ಮಾಡಿದ್ದ ಹಸುವಿನ ಮಾಲೀಕನೂ ಸಿಕ್ಕಿಬಿದ್ದಿದ್ದಾನೆ. ಬಂಧಿತರನ್ನು ಹನೂರು ತಾಲೂಕಿನ ಕೊಪ್ಪ ಗ್ರಾಮದ ಕೂನಪ್ಪ, ಮಾದರಾಜ, ನಾಗರಾಜ ಎಂದು ಅರಣ್ಯ ಇಲಾಖೆ ಅಧಿಕೃತವಾಗಿ ಧೃಡಪಡಿಸಿದೆ. ಸದ್ಯ ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಗಸ್ತಿನಲ್ಲಿ ತಾಯಿ ಮತ್ತು ನಾಲ್ಕು ಮರಿ ಹುಲಿಗಳು ಧಾರಣವಾಗಿ ಸಾವನ್ನಪ್ಪಿದ್ದು, ಇದಕ್ಕೆ ವಿಷ ಮಿಶ್ರಿತ ಮಾಂಸ ಸೇವೆನೆ ನೀಡಿರುವುದು ತನಿಖೆಯಲ್ಲಿ ಖಚಿತವಾಗಿದೆ. ಮೃತ ಹುಲಿಗಳ ಬಳಿಯೇ ಹಸುವೊಂದು ಸಾವನ್ನಪ್ಪಿದ್ದು, ಅದರ ಮೇಲೆ ಕ್ರೀಟನಾಶಕವನ್ನು ಹಾಕಿರುವುದೂ ಬಯಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net