ಭಾರತೀಯ ಸೇನೆಯ ಏಟಿಗೆ ತತ್ತರಿಸುತ್ತಿದೆ ಉಗ್ರ ಪಡೆ: ಮತ್ತೆ ಐವರ ಸೆರೆ

terroristweb
ಸಾಂದರ್ಭಿಕ ಚಿತ್ರ
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ದಮನಕ್ಕೆ ಭಾರತೀಯ ಸೇನೆ ಸಜ್ಜಾಗಿ ನಿಂತಿದೆ. ಕಳೆದೆರಡು ತಿಂಗಳುಗಳಿಂದ ಲಷ್ಕರ್‌-ಎ- ತಯಬಾ ಸೇರಿದಂತೆ ಹಲವಾರು ಉಗ್ರ ಸಂಘಟನೆಯ ಮುಖ್ಯಸ್ಥರೂ ಸೇರಿದಂತೆ ಅನೇಕ ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.

ಈ ನಡುವೆಯೇ ಇದೀಗ ನಿನ್ನೆ ಐವರು ಉಗ್ರರನ್ನು ಸೆರೆ ಹಿಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಬದ್ಗಾಮ್ ಜಿಲ್ಲೆಯ ನರ್ಬಾಲ್‌ನಲ್ಲಿ ಇಂದು ಪೊಲೀಸರು ಹಾಗೂ ಸೇನಾಪಡೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರಿದು ಕಾರ್ಯಾಚರಣೆ ಕೈಗೊಂಡು ಉಗ್ರರ ಹೆಡೆಮುರಿ ಕಟ್ಟಿದ್ದಾರೆ.

ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಸೇನಾಪಡೆ ಐವರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಇಮ್ರಾನ್ ರಷೀದ್, ಇಫ್ಶಾನ್ ಅಹಮದ್ ಘನಿ, ಓವೈಸಿ ಅಹಮದ್, ಮೊಹಿಸೀನ್ ಖಾದರ್ ಹಾಗೂ ಅಬಿದ್ ರಾಥರ್ ಎಂದು ಗುರುತಿಸಲಾಗಿದೆ. ಈ ಉಗ್ರರ ಬಳಿ ಇದ್ದ ಎಕೆ-47 ರೈಫಲ್, 28 ಸಜೀವ ಗುಂಡುಗಳು, ಒಂದು ಮ್ಯಾಗಜಿನ್, ಲಷ್ಕರ್ ಸಂಘಟನೆಗೆ ಸೇರಿದ ಸುಮಾರು ಇಪ್ಪತ್ತು ಪೋಸ್ಟರ್ ಗಳನ್ನು ಬದ್ಗಾಮ್ ಪೊಲೀಸರು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net