

ಮುಂಬೈ: ಮದುವೆ ದಿಬ್ಬಣದ ಬಸ್ವೊಂದು (Bus) ಅಪಘಾತಕ್ಕೀಡಾಗಿ ಐದು ಮಂದಿ ಮೃತಪಟ್ಟು, 25ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯ್ಘಡ್ನಲ್ಲಿ ನಡೆದಿದೆ.
ಮೃತರನ್ನು ಸಂಗೀತಾ ಜಾಧವ್, ಗೌರವ್ ದಾರಾಡೆ, ಶಿಲ್ಪಾ ಪವಾರ್, ವಂದನಾ ಜಾಧವ್ ಎಂದು ಗುರುತಿಸಲಾಗಿದ್ದು, ಇನ್ನೋರ್ವ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ದುರ್ಘಟನೆಯ ಕುರಿತು ಮಾತನಾಡಿರುವ ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ, ಘಟನೆಯು ಶುಕ್ರವಾರ (ಡಿಸೆಂಬರ್ 20) ಬೆಳಗ್ಗೆ 9:30ಕ್ಕೆ ಸಂಭವಿಸಿದ್ದು, ಪುಣೆಯ ಲೋಹೆಗಾಂವ್‌ನಿಂದ ಮಹಾಡ್‌ನ ಬಿರ್ವಾಡಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ. ಚಾಲಕನ್ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಕಮರಿಗೆ ಉರುಳಿದ್ದು, ದುರ್ಘಟನೆ ಸಂಭವಿಸಿದೆ.
ಚಾಲಕನ ನಿರ್ಲಕ್ಷ್ಯದಿಂದಾಗಿ ಅವಘಡ ಸಂಭವಿಸಿದ್ದು, ಗಾಯಾಳುಗಳನ್ನು ಗ್ರಾಮೀಣ ಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂವರು ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪುಣೆಯ ಸ್ಯಾಸೂನ್ ಜನರಲ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.