ಅಮೃತಸರ: ಪಂಜಾಬ್ನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಸ್ವರ್ಣ ಮಂದಿರದಲ್ಲಿ ವ್ಯಕ್ತಿಯೊಬ್ಬ ಜನರ ಮೇಲೆ ದಾಳಿ ಮಾಡಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸ್ವರ್ಣ ಮಂದಿರದ ಗುರು ರಾಮ್ದಾಸ್ ಲಂಗರ್ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಅಲ್ಲಿದ್ದ ಜನರು ಆರೋಪಿಯನ್ನು ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
#WATCH | Amritsar, Punjab: Five were injured as a person attacked people with an iron rod in Shri Guru Ramdas Sarai in the Golden Temple premises.
ACP Jaspal Singh says, “A person named Zulfan resident of Yamuna Nagar, Haryana climbed on the second floor of Guru Ram Das Sarai… pic.twitter.com/AOEZ9hCXGk
— ANI (@ANI) March 14, 2025
ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಸರ್ಮೆಲ್ ಸಿಂಗ್, ಆರೋಪಿಯನ್ನು ಹರಿಯಾಣ ನಿವಾಸಿ ಜುಲ್ಫಾನ್ ಎಂದು ಗುರುತಿಸಲಾಗಿದ್ದು, ಈತ ಜನರ ಮೇಲೆ ಹಲ್ಲೆ ಮಾಡುವುದಕ್ಕೂ ಮುನ್ನ ಮಂದಿರದ ಸುತ್ತ ಸರ್ವೇ ಮಾಡಿದ್ದ. ಈತನ ಜತೆಗಿದ್ದ ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದು, ಆತನನ್ನು ಹುಡುಕಲಾಗುತ್ತಿದೆ.
ಆರೋಪಿ ಭಕ್ತರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ. ಇನ್ನು ನಾಲ್ಕು ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಹಲ್ಲೆಗೊಳಗಾಗಿದ್ದ ಆರೋಪಿಯು ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸರ್ಮೆಲ್ ಸಿಂಗ್ ತಿಳಿಸಿದ್ಧಾರೆ.
ರಸ್ತೆ ಬದಿ ನಿಂತಿದ್ದ ಯುವಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಆಘಾತಕಾರಿ Video Viral
ಗಾಯಕ್ಕೆ ತುತ್ತಾಗಿದ್ದ ಆಟಗಾರ ಈಗ ಸಂಪೂರ್ಣ ಫಿಟ್; ಐಪಿಎಲ್ ಆರಂಭಕ್ಕೂ ಮುನ್ನ ಎಲ್ಎಸ್ಜಿಗೆ ಸಿಕ್ತು ಭರ್ಜರಿ ಸುದ್ದಿ