More

  ಅಂತಿಮ ಘಟ್ಟಕ್ಕೆ ತಲುಪಿದ ಕಾರ್ಮಿಕರ ರಕ್ಷಣೆ ಕಾರ್ಯ; ಸಿಲ್ಕ್ಯಾರಾ ಸುರಂಗದ ಹೊರಗೆ ನಿಂತ 41 ಆಂಬ್ಯುಲೆನ್ಸ್‌, ಚಿನೂಕ್ ಹೆಲಿಕಾಪ್ಟರ್

  ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. 41 ಆಂಬ್ಯುಲೆನ್ಸ್‌ ಸುರಂಗದ ಹೊರಗೆ ನಿಂತಿವೆ. ಈ ಆಂಬ್ಯುಲೆನ್ಸ್‌ ಎಲ್ಲಾ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿವೆ. ಸುರಂಗದಿಂದ 41 ಕಾರ್ಮಿಕರನ್ನು ಹೊರತೆಗೆದ ತಕ್ಷಣ, ಈ ಆಂಬ್ಯುಲೆನ್ಸ್‌ ಸಹಾಯದಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.

  ಈ 41 ಆಂಬ್ಯುಲೆನ್ಸ್‌ ಹೊರತಾಗಿ, ಸೇನೆಯ ಚಿನೂಕ್ ಹೆಲಿಕಾಪ್ಟರ್ ಸಿದ್ಧವಾಗಲಿದೆ. ಯಾವುದೇ ಕಾರ್ಮಿಕರಿಗೆ ಗಂಭೀರ ಆರೋಗ್ಯ ಸಮಸ್ಯೆಯಿದ್ದರೆ ಮತ್ತು ಏರ್‌ಲಿಫ್ಟ್​​​ನ ಅಗತ್ಯವಿದ್ದಲ್ಲಿ, ಚಿನೂಕ್ ಹೆಲಿಕಾಪ್ಟರ್ ಅನ್ನು ಇದಕ್ಕಾಗಿ ಸಿದ್ಧವಾಗಿ ಇರಿಸಲಾಗುತ್ತದೆ. ಚಿನೂಕ್ ಹೆಲಿಕಾಪ್ಟರ್ ಶೀಘ್ರದಲ್ಲೇ ಚಿನ್ಯಾಲಿಸೌರ್ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಿದ ನಂತರ ಉತ್ತರಾಖಂಡ ಸರ್ಕಾರ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ.

  ಸಿಲ್ಕ್ಯಾರದ ಸುರಂಗದ ಕೊರೆತಕ್ಕೆ ಕೆಲವೇ ಕಿಮೀ ಬಾಕಿ ಇದೆ. ಕಳೆದ 12 ದಿನಗಳಿಂದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಯಾವುದೇ ಸಮಯದಲ್ಲಿ ರಕ್ಷಿಸುವ ಸಾಧ್ಯತೆ ಇದೆ. 8 ರಾಜ್ಯಗಳ 41 ಕಾರ್ಮಿಕರು ಕಳೆದ 12 ದಿನಗಳಿಂದ ಸಿಲ್ಕ್ಯಾರದ ಸುರಂಗದಲ್ಲಿ ಸಿಲುಕಿದ್ದಾರೆ. ದೀಪಾವಳಿಯ ದಿನದಿಂದಲೂ ಅವರ ಸುರಕ್ಷಿತ ರಕ್ಷಣೆಗಾಗಿ ರಕ್ಷಣಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ವಿದೇಶಿ ತಜ್ಞರೂ ಭಾಗಿಯಾಗಿರುವುದು ವಿಶೇಷ. ಇವರಲ್ಲಿ ಆಸ್ಟ್ರೇಲಿಯಾದ ನಿವಾಸಿ ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಸೇರಿದ್ದಾರೆ.

  ನ.12ರ ಬೆಳಗ್ಗೆಯಿಂದ ಸಿಲ್ಕ್ಯಾರದ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿದ್ದಾರೆ. ಈ ಪೈಕಿ, ಜಾರ್ಖಂಡ್‌ನಿಂದ ಗರಿಷ್ಠ ಸಂಖ್ಯೆಯ (15) ಕಾರ್ಮಿಕರು ಇದ್ದಾರೆ. ಉತ್ತರ ಪ್ರದೇಶದ 8 ಕಾರ್ಮಿಕರು, ಒಡಿಶಾದ ಐವರು ಮತ್ತು ಬಿಹಾರದ ನಾಲ್ವರು, ಪಶ್ಚಿಮ ಬಂಗಾಳದ 3 ಮತ್ತು ಅಸ್ಸಾಂನ 3 ಜನರು ಸುರಂಗದಲ್ಲಿ ಸಿಲುಕಿದ್ದಾರೆ. ಉತ್ತರಾಖಂಡದ ಇಬ್ಬರು ಕಾರ್ಮಿಕರು ಮತ್ತು ಹಿಮಾಚಲ ಪ್ರದೇಶದ ಒಬ್ಬ ಕಾರ್ಮಿಕ ಕೂಡ ಕಳೆದ 12 ದಿನಗಳಿಂದ ಸಿಲ್ಕ್ಯಾರದ ಈ ಸುರಂಗದಲ್ಲಿ ಸಿಲುಕಿದ್ದಾರೆ. 12 ದಿನಗಳಲ್ಲಿ ಸುಮಾರು 265 ಗಂಟೆಗಳ ಕಾಲ ಕಾರ್ಮಿಕರು ಈ ಸುರಂಗದಲ್ಲಿದ್ದಾರೆ. 

  ವೆಜ್‌ ಪಲಾವ್‌, ಮಟರ್ ಪನೀರ್, ಬೆಣ್ಣೆ ಚಪಾತಿ… ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಕಳುಹಿಸಲಾದ ಆರೋಗ್ಯಕಾರಿ ಆಹಾರಗಳಿವು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts