ಸ್ಟೂಡೆಂಟ್ ಜತೆ ರೊಮ್ಯಾಂಟಿಕ್ ಫೋಟೋಶೂಟ್..ಇತ್ತ 20ರ ವಿದ್ಯಾರ್ಥಿಯನ್ನೇ ಮದ್ವೆಯಾದ 40ರ ಶಿಕ್ಷಕಿ

Viral Video Captures Lady Teacher Marries Student Reportedly In Samastipur District Of Bihar
Published on

ಬೆಂಗಳೂರು: ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿಸಿಕೊಂಡಿರುವ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ಅಮಾನತು ಮಾಡಲಾಗಿತ್ತು.  ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಇತ್ತ 40 ವರ್ಷದ ಶಿಕ್ಷಕಿಯೊಬ್ಬರು ಮತ್ತು 20 ವರ್ಷದ ವಿದ್ಯಾರ್ಥಿಯನ್ನು ಮದುವೆಯಾದ ಹಳೆ ವಿಡಿಯೋ ಕೂಡಾ ವೈರಲ್​​ ಆಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟೊ ಶೂಟ್ ಮಾಡಿಸಿಕೊಂಡಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.ಫೋಟೋಗಳಲ್ಲಿ, ವಿದ್ಯಾರ್ಥಿ ಮತ್ತು ಮುಖ್ಯ ಶಿಕ್ಷಕಿ ಆಕ್ಷೇಪಾರ್ಹ ರೀತಿಯಲ್ಲಿ ವಿವಿಧ ಪೋಸ್ ನೀಡಿರುವುದು ಕಂಡುಬಂದಿದೆ. ವಿದ್ಯಾರ್ಥಿಯು ಶಿಕ್ಷಕಿಯ ಕೆನ್ನೆಗೆ ಮುತ್ತಿಡುವುದು ಮತ್ತು ಹಿಂಬದಿಯಿಂದ ಸೆರಗನ್ನ ಎಳೆದು ಹಿಡಿದಿರುವುದು, ಶಿಕ್ಷಕಿಯನ್ನು ಎತ್ತಿಕೊಂಡಿರುವುದು ಸೇರಿದಂತೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಲಾಗಿದೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಸುದ್ದಿಯಲ್ಲಿತ್ತು.

romantic photoshoot

2022 ಡಿಸೆಂಬರ್​ 12 ರಂದು ಬಿಹಾರದ ಸಮಸ್ತಿಪುರದಲ್ಲಿ 40 ವರ್ಷದ ಶಿಕ್ಷಕಿಯೊಬ್ಬರು ಮತ್ತು 20 ವರ್ಷದ ವಿದ್ಯಾರ್ಥಿಯನ್ನು ದೇವಾಲಯದಲ್ಲಿ ಮದುವೆ ಮಾಡಿಕೊಂಡರು. ಅದನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗಿದ್ದು, ಅದೀಗ ವೈರಲ್ ಆಗಿದೆ.

ಶಿಕ್ಷಕಿ ಮತ್ತು ವಿದ್ಯಾರ್ಥಿಯು ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವುದನ್ನು ವಿಡಿಯೋ ತುಣುಕಿನಲ್ಲಿ ತೋರಿಸಲಾಗಿದೆ ಮತ್ತು ವಿಡಿಯೋ ಕ್ಷಿಪ್ರ ವೇಗದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ತಮಾಷೆಯಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.

ಆದರೆ ಇದು ಸಾಮಾಜಿಕ ಕಟ್ಟುಪಾಡುಗಳು ಮತ್ತು ಮನುಷ್ಯರ ನಡುವಣ ಸಂಬಂಧಗಳ ಸಂಕೀರ್ಣತೆಗಳ ಬಗ್ಗೆ ಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅವರ ಸಂಬಂಧದ ಸ್ವರೂಪದ ಬಗ್ಗೆ ವೈವಿಧ್ಯಮಯ ಅಭಿಪ್ರಾಯಗಳು ಹರಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net