Lottery Prize: ಇತ್ತೀಚೆಗಷ್ಟೇ ಅಮೇರಿಕಾದ ಮೇರಿಲ್ಯಾಂಡ್ ನಿವಾಸಿ 5 ಲಕ್ಷ ರೂ. ಲಕ್ಕಿ ಡ್ರಾ ಲಾಟರಿಯಲ್ಲಿ ಬರೋಬ್ಬರಿ 50 ಡಾಲರ್ ಅಂದರೆ ಅಂದಾಜು 42 ಲಕ್ಷ ರೂ. ಹಣವನ್ನು ಬಹುಮಾನವಾಗಿ ಗೆದ್ದಿದ್ದಾರೆ. ಈ ಲಾಟರಿ ಟಿಕೆಟ್ ಖರೀದಿಸುವ ಮೊದಲು ಗೆದ್ದ ಸಂಖ್ಯೆಗಳು ತನ್ನ ಕನಸಿನಲ್ಲಿಯೇ ಕಾಣಿಸಿಕೊಂಡಿತ್ತು ಎಂದು ಆಕೆ ವಿವರಿಸಿದ್ದಾಳೆ. ಈ ವಿಷಯ ಕೇಳಿದ ಜನರು ಒಂದು ನಿಮಿಷ ಅಚ್ಚರಿಗೆ ಒಳಗಾಗಿದ್ದಲ್ಲದೇ, ಹೀಗೂ ಸಾಧ್ಯವೇ ಎಂಬ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Shivraj Kumar fan club | ಶಿವರಾಜ್ ಕುಮಾರ್ ಅಭಿಮಾನಿ ಸಂಘದಿಂದ 2025ರ ನೂತನ ಡಾ.ರಾಜ್ ಶಿವ ಸೈನ್ಯ ಕ್ಯಾಲೆಂಡರ್ ಬಿಡುಗಡೆ
ಮೇರಿಲ್ಯಾಂಡ್ ಲಾಟರಿ ಅಧಿಕಾರಿಗಳ ಬಳಿ ತಾನು 42 ಲಕ್ಷ ರೂ. ಗೆದ್ದ ಬಗ್ಗೆ ಮಾತನಾಡಿದ ವಿಜೇತ ಮಹಿಳೆ, ನೀವಿಲ್ಲಿ ಇರಿಸಿದ್ದ ಸಂಖ್ಯೆ ಕಳೆದ ಡಿಸೆಂಬರ್‌ನಲ್ಲಿ ನಾನು ದಿಢೀರ್ ನನ್ನ ಕನಸಿನಿಂದ ಎಚ್ಚರಗೊಂಡಿದ್ದೆ. ಆಗ ನನ್ನನ್ನು ಈ ಸಂಖ್ಯೆಗಳು ಬಹಳ ಕಾಡಿತ್ತು. ಏಕೆ ಎಂಬುದು ನಿಜಕ್ಕೂ ನನಗೆ ಗೊತ್ತಿರಲಿಲ್ಲ. ಇದು ಮನಸ್ಸಿನಲ್ಲಿಯೇ ಪ್ರತಿಧ್ವನಿಸುತ್ತಿತ್ತು. ಅದನ್ನೇ ಇಲ್ಲಿ ಪ್ರಯೋಗಿಸಿದೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಅಸಲಿಗೆ ಮಹಿಳೆ ಲಕ್ಕಿ ಲಾಟರಿ ಎತ್ತಲು ಬಳಸಿದ ಸಂಖ್ಯೆ 9-9-0-0-0. ಇದೇ ನಂಬರ್ಗಳು ಅಲ್ಲಿಯೂ ಗೋಚರಿಸಿರುವುದು ಆಕೆಗೆ ಅದೃಷ್ಟದ ಬಾಗಿಲನ್ನು ತೆರೆದುಕೊಟ್ಟಿದೆ.
ಪತ್ನಿಯ ಗೆಲುವಿನ ಬಗ್ಗೆ ಅಚ್ಚರಿ ಹೊರಹಾಕಿದ ಪತಿ ಪ್ರತಿಕ್ರಿಯಿಸಿ, “ನಿಜಕ್ಕೂ ನನ್ನ ಹೆಂಡತಿ ಹೇಳಿದ್ದು ಈಗ ಗೊತ್ತಾಯಿತು. ಈ ಸಂಖ್ಯೆ ಅಂದು ಆಕೆಯ ಕನಸಿನಲ್ಲಿ ಬಂದಿತ್ತು. ಇದರ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದಳು. ಆದ್ರೆ, ಆ ಸಂಖ್ಯೆ ನಮಗೆ ಅದೃಷ್ಟವಾಗಿ ಬದಲಾಗುತ್ತೆ ಎಂದು ನಮಗೆ ತಿಳಿದಿರಲಿಲ್ಲ. ಈ ಹಣ ಅವಳದ್ದೇ, ಅವಳಿಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಲಿ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
20 ಪುರುಷರ ಹಣ 1 ಬಸ್ಗೆ.. ಉಚಿತ ಪ್ರಯಾಣ ಭಾಗ್ಯ ಕೊಟ್ಟ ಸರ್ಕಾರಕ್ಕೆ ಪ್ರಯಾಣಿಕನ 6 ನೇರ ಪ್ರಶ್ನೆಗಳಿವು | Freebies