

Floor Fall : ಚೀನಾದ ಹುಸೇನ್ ವಸತಿ ಕಟ್ಟಡದ 20 ನೇ ಮಹಡಿಯಿಂದ 4 ವರ್ಷದ ಬಾಲಕಿಯೊಬ್ಬಳು ಆಯ ತಪ್ಪಿ ಕೆಳಗೆ ಜಾರಿದ್ದು, ಆಕೆಯನ್ನು 13 ನೇ ಮಹಡಿಯಿಂದ ರಕ್ಷಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮಗುವೊಂದು ಅಪಾರ್ಟ್ಮೆಂಟ್ನ 20 ಕಿಟಕಿಯಿಂದ ಕೆಳಗೆ ಜಾರಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ವೇಳೆ ಬಾಲಕಿ ನೇರವಾಗಿ 13 ನೇ ಮಹಡಿಯ ಕಿಟಕಿಯ ಸೆಲ್ಪ್ ಬಳಿ ಸಿಲುಕಿದ್ದು, ಆಕೆಯನ್ನು ಗಮನಿಸಿದ 14 ನೇ ಮಹಡಿಯ ಸಿಬ್ಬಂದಿಯೊಬ್ಬರು ಮಗು ನೇತಾಡುವುದನ್ನು ಗಮನಿಸಿದ್ದು, ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಇನ್ನು ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಅಲ್ಲಿಯ ನಿವಾಸಿ ವೂ ಅವರು ಆಕೆಯ ಕೈಗಳನ್ನು ಗಟ್ಟಿ ಹಿಡಿದುಕೊಂಡಿದ್ದು, ಬಾಲಕಿಯನ್ನು ನಿಧಾನವಾಗಿ ಮೇಲೆತ್ತಿಕೊಂಡಿದ್ದಾರೆ. ಈ ವೇಳೆ ಬಾಲಕಿ ಹಾಗೂ ವೂ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದು ಕಂಡುಬಂದಿದೆ.
ಘಟನೆ ನಂತರ ಅಧಿಕಾರಿಗಳು ಶ್ರೀಮತಿ ವೂ ಅವರ ತ್ವರಿತ ಚಿಂತನೆ ಮತ್ತು ಧೈರ್ಯವನ್ನು ಶ್ಲಾಘಿಸಿ, ಸುಮಾರು 62,300ರೂ ಜೊತೆಗೆ ಮಾನ್ಯತೆ ಪ್ರಮಾಣ ಪತ್ರವನ್ನು ನೀಡಿದರು. ಅದನ್ನೆಲ್ಲವನ್ನು ನಿರಾಕರಿಸಿದ ಇವರು ಯಾವುದೇ ನೆರಹೊರೆಯವರು ಮಾಡಬೇಕಾದನ್ನು ನಾನು ಮಾಡಿದ್ದೇನೆ ಎಂದರು.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಗುವನ್ನು ಉಳಿಸಲು ಶ್ರೀಮತಿ ವೂ ಅವರ ಮನಸ್ಸಿನ ಉಪಸ್ಥಿತಿ ಮತ್ತು ಪ್ರಯತ್ನಕ್ಕಾಗಿ ಸಾಮಾಜಿಕ ಜಾಲತಾಣದ ಬಳಕೆದಾರರು ಅವರನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಎತ್ತರದ ಕಟ್ಟಡದಲ್ಲಿರುವ ಜನರು ತಮ್ಮ ಮಕ್ಕಳ ಬಗ್ಗೆ ಸುರಕ್ಷತೆ ವಹಿಸಬೇಕು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)