ದಸರಾ ಹಬ್ಬದಂದು ಈ ರೀತಿ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ! Horoscope

Horoscope 2025
Published on

Horoscope: ದಸರಾ ಹಬ್ಬವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿದೆ. ಈ ಹಬ್ಬವನ್ನು ನಾಡಿನಾದ್ಯಂತ ಜನರು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನದಂದು ರಾವಣನ ಪ್ರತಿಮೆಯನ್ನು ತಯಾರಿಸಿ ಸುಡಲಾಗುತ್ತದೆ. ಹಾಗಾಗಿ ದಸರಾ ದಿನದಂದು ಅನೇಕ ಪರಿಹಾರಗಳನ್ನು ನೀವು ಕಂಡುಕೊಳ್ಳಬಹುದು. ಇದು ನಿಮ್ಮ ಮೇಲಿನ ನಕರಾತ್ಮಕ ಪರಿಣಾಮಗಳನ್ನು ತೆಗೆದುಹಾಕುತ್ತದೆ ಮತ್ತು ಸಂತೋಷವನ್ನು ತರುತ್ತದೆ. ಜಾತಕದಲ್ಲಿ ಶನಿಗೆ ಸಂಬಂಧಿಸಿದ ಯಾವುದೇ ದೋಷವನ್ನು ಹೊಂದಿದ್ದಲ್ಲಿ ಅದನ್ನು ಪರಿಹಾರ ಮಾಡುವುದರ ಮೂಲಕ ದೋಷವನ್ನು ಪರಿಹರಿಸಿಕೊಳ್ಳಬಹುದು.

1. ಶನಿ ದೇವರು ಮತ್ತು ಆಂಜನೇಯ ಸ್ವಾಮಿ ಪೂಜೆ ಮಾಡಿ

ಹನುಮಾನ ಭಕ್ತರು ಮತ್ತು ನಿಯಮಿತವಾಗಿ ಹನುಮಾನ್​ ಚಾಲೀಸಾ ಪಠಿಸುವಂತಹ ಜನರಿಗೆ ಶನಿ ದೋಷಗಳು ಬರುವುದಿಲ್ಲ. ನಿಮ್ಮ ಜಾತಕದಲ್ಲಿ ಶನಿ ದೋಷ ಇದ್ದರೆ, ಅವರು ತಪ್ಪದೆ ದಸರಾ ದಿನದಂದು ಹನುಮಾನ್​ ಹಾಗೂ ಶನಿ ದೇವರ ಪೂಜೆಯನ್ನು ಮಾಡಿ ದೋಷವನ್ನು ದೂರ ಮಾಡಿ.

2. ಶಮಿ ಗಿಡವನ್ನು ಪೂಜಿಸಿ

ನಿಮ್ಮ ಜಾತಕದಲ್ಲಿ ಶನಿಗೆ ಸಂಬಂಧಿಸಿದ ದೋಷಗಳಿದ್ದರೆ ಅವರು ದಸರಾ ದಿನದಂದು ಈಶಾನ್ಯ ದಿಕ್ಕಿನಲ್ಲಿ ಶಮಿ ಗಿಡವನ್ನು ನೆಟ್ಟು ಪೂಜಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿರುವ ಶನಿಯ ತೊಂದರೆಗಳು ನಿವಾರಣೆಯಾಗುತ್ತವೆ.

3. ತೆಂಗಿನಕಾರಿ ಪರಿಹಾರ

ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ದಸರಾ ದಿನದಂದು, ರಾವಣನ ದಹನದ ಸಮಯದಲ್ಲಿ, ನೀರು ಇರುವಂತಹ 21 ತೆಂಗಿನಕಾಯಿಯನ್ನು ತೆಗೆದುಕೊಂಡು ತಲೆಯ ಎತ್ತಿರದಿಂದ ಬೀಸಿ ಬೆಂಕಿಗೆ ಒಗೆಯಿರಿ. ಇದು ಶನಿ ದೋಷವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

4. ದೀಪ ಹಚ್ಚುವುದು

ಯಾವುದೇ ವ್ಯಕ್ತಿಯು ಶನಿ ದೋಷದಿಂದ ಹೊಂದಿದ್ದರೆ ಅವರು ದಸರಾ ದಿನದಂದು ಸಾಸಿವೆ ಎಣ್ಣೆಯನ್ನು ಹಚ್ಚಿ ಮನೆಯ ದೇವರಿಗೆ ಬೆಳಗುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

5. ರಾಮಚರಿತಮಾನಸ ಪಠಣೆ

ಯಾರಿಗಾದರೂ ಜಾತಕದಲ್ಲಿ ಶನಿಯ ದೋಷ ಇದ್ದಲ್ಲಿ ಅವರು ದಸರಾ ಹಬ್ಬದಂದು ಮನೆಯಲ್ಲಿ ಸುಂದರಕಾಂಡ ಮತ್ತು ರಾಮಚರಿತಮಾನಸವನ್ನು ಪಠಿಸಿ ಇದರಿಂದ ಶನಿ ದೋಷದಿಂದ ಮುಕ್ತಿಯನ್ನು ಪಡೆಯಲು ಅನುಕೂಲವಾಗಿರುತ್ತದೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net