ನಾಲ್ವರು ಪತ್ನಿಯರು, ಇಬ್ಬರು ಗೆಳತಿಯರ ಮುದ್ದಿನ ಗಂಡನಿಗೆ 54 ಮಕ್ಕಳು ಪಡೆಯೋ ಆಸೆ!  ಹೊಸ ಹೆಂಡತಿಗಾಗಿ ಹುಡುಕಾಟ..Interesting Story

japanman
Published on

ಜಪಾನ್‌: ಬಹುಪತ್ನಿತ್ವ ಕಾನೂನು ಬಾಹಿರವಾಗಿದ್ದರು,  ನಾಲ್ವರು ಪತ್ನಿಯರು ಮತ್ತು ಇಬ್ಬರು ಗೆಳತಿಯರನ್ನು ಹೊಂದಿರುವ ವ್ಯಕ್ತಿ 54 ಮಕ್ಕಳನ್ನು ಹೊಂದುವ ಗುರಿಯನ್ನು ಹೊಂದಿದ್ದಾನೆ.  ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್ ( Interesting story )​​ ಆಗುತ್ತಿದೆ.

 ಜಪಾನ್‌ನ ಉತ್ತರ ಹೊಕ್ಕೈಡೊ ಪ್ರಾಂತ್ಯದಲ್ಲಿ ವಾಸಿಸುವ 36 ವರ್ಷದ ರ್ಯುಟಾ ವಟನಾಬೆ ಬಗ್ಗೆ ಮಾತನಾಡುತ್ತಿದ್ದೇವೆ . Ryuta ನಿರುದ್ಯೋಗಿಯಾಗಿದ್ದು, ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿಲ್ಲ. ಪತ್ನಿ, ಗೆಳತಿಯರ ಸಂಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. 54 ಮಕ್ಕಳನ್ನು ಹೊಂದುವ ಗುರಿಯನ್ನು ಹೊಂದಿದ್ದಾನೆ.

ರ್ಯುಟಾಗೆ ಈಗಾಗಲೇ 10 ಮಕ್ಕಳಿದ್ದಾರೆ.  ತಮ್ಮ ಮೂವರು ಪತ್ನಿಯರೊಂದಿಗೆ ಒಂದೇ ಸೂರಿನಡಿ ವಾಸಿಸುತ್ತಿದ್ದರೆ, 24 ವರ್ಷಗಳ ಅವರ ನಾಲ್ಕನೇ ಪತ್ನಿ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ತನ್ನ ಇಬ್ಬರು ಗೆಳತಿಯರನ್ನು ಭೇಟಿಯಾಗಿದ್ದಾನೆ. ತನ್ನ ನಾಲ್ಕನೇ ಹೆಂಡತಿಯಿಂದ ಬೇರ್ಪಟ್ಟ ನಂತರ, ರ್ಯುಟೊ ಈಗ ಹೊಸ ಹೆಂಡತಿಯನ್ನು ಹುಡುಕುತ್ತಿದ್ದಾನೆ. ರ್ಯುಟಾ ವಟನಾಬೆ ಮನೆಯಲ್ಲಿ ಗಂಡನ ಪಾತ್ರ ನಿರ್ವಹಿಸುವುದರ ಜತೆ ಮನೆಕೆಲಸ, ಅಡುಗೆ, ಮಕ್ಕಳ ಆರೈಕೆ ಎಲ್ಲವನ್ನೂ ಮಾಡುತ್ತಾನೆ.

ಜಪಾನೀಸ್ ಟಿವಿ ಶೋ ಅಬೆಮಾ ಪ್ರೈಮ್‌ನಲ್ಲಿ ಭಾಗವಹಿಸಿದ ( Ryouta Watanabe )ರ್ಯೂಟ್, ನನಗೆ ಮಹಿಳೆಯರೆಂದರೆ ತುಂಬಾ ಇಷ್ಟ. ನಾವು ಒಬ್ಬರನ್ನೊಬ್ಬರು ಸಮಾನವಾಗಿ ಪ್ರೀತಿಸುವವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. Ryouta Watanabe ಅವರ ಮನೆಯ ವೆಚ್ಚವು ತಿಂಗಳಿಗೆ ಸುಮಾರು 914,000 ಯೆನ್ (Rs 5 ಲಕ್ಷ) ಬರುತ್ತದೆ. ಇದನ್ನು ಅವರ ಪತ್ನಿಯರು ಮತ್ತು ಗೆಳತಿಯರ ನಡುವೆ ಖರ್ಚು ಹಂಚಲಾಗುತ್ತದೆ.ಹೆಚ್ಚು ಮಕ್ಕಳ ತಂದೆಯಾಗಲು ಬಯಸುತ್ತೇನೆ ಎಂದು ಹೇಳಿದ್ದಾನೆ.

ಜಪಾನ್‌ನಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ 182 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಮದುವೆಯ ದೇವರು ಎಂದು ಕರೆಯಲ್ಪಡುವ ಬಿರುದನ್ನು ಸಾಧಿಸಲು ತಾನು ಬಯಸುತ್ತೇನೆ. ದಾಖಲೆಗಳ ಪ್ರಕಾರ, ಜಪಾನಿನ ಆಡಳಿತಗಾರ ಟೊಕುಗಾವಾ ಐನಾರಿ 1841 ರಲ್ಲಿ ನಿಧನರಾದರು. ಅವರ ಆಳ್ವಿಕೆಯಲ್ಲಿ ಅವರು 27 ಮಹಿಳೆಯರಿಂದ 53 ಮಕ್ಕಳಿಗೆ ಜನ್ಮ ನೀಡಿದರು. 54 ಮಕ್ಕಳನ್ನು ಹೆತ್ತರೆ ಅವರ ಹೆಸರೂ ಇತಿಹಾಸದಲ್ಲಿ ದಾಖಲಾಗುತ್ತದೆ. ಅದಕ್ಕಾಗಿಯೇ  ಈಗ ಹೊಸ ಹೆಂಡತಿಯರನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net