ಅಂದಹಾಗೆ, 'ಪುಷ್ಟ-ಭಾಗ1' ಚಿತ್ರ ಡಿ.17 ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ. ಹಾಗಾಗಿ, ಚಿತ್ರತಂಡ ಹಲವಾರು ಪ್ರೀ-ರಿಲೀಸ್ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಮೊದಲು ಹೈದರಾಬಾದ್ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಮುಗಿಸಿದ ನಂತರ 'ಪುಷ್ಟ' ಚಿತ್ರತಂಡ, ಸಿನಿಮಾ ಬಿಡುಗಡೆಯಾಗುತ್ತಿರುವ ಬೇರೆ 4 ಭಾಷೆಗಳ ರಾಜ್ಯಗಳಿಗೆ ಹೋಗಿ ತಮ್ಮ ಸಿನಿಮಾವನ್ನು ಪ್ರಮೋಟ್ ಮಾಡಿಕೊಳ್ಳಲಿದ್ದಾರೆ. ಮುಂಬೈ, ಬೆಂಗಳೂರು, ಚೆನೈ, ತಿರುವನಂತಪುರಂ ನಗರಗಳಿಗೆ ತೆರಳಿ ಇಡೀ ಚಿತ್ರತಂಡ ಅಭಿಮಾನಿಗಳನ್ನು 'ಪುಷ್ಟ' ಸಿನಿಮಾ ನೋಡಲು ವಿನಂತಿಸಲಿದ್ದಾರೆ. ಸಿನಿಮಾದ ಟ್ರೈಲರ್, ಹಾಡುಗಳು ಈಗಾಗಲೇ ಹಿಟ್ ಎಂದು ಹೇಳಲಾಗುತ್ತಿದ್ದು, ಚಿತ್ರ ಸಹ ಎಲ್ಲರ ಮನಗೆಲ್ಲುವಲ್ಲಿ ಸಂಶಯವಿಲ್ಲ ಎಂದು ಸಿನಿಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ.