ನೆಲ್ಯಾಡಿಯಲ್ಲಿ 4 ಮನೆ, 2 ವಿದ್ಯುತ್ ಕಂಬಗಳಿಗೆ ಹಾನಿ

kkd_House-damage
Published on

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಜನತಾ ಕಾಲೋನಿ ಪರಿಸರದಲ್ಲಿ ಬುಧವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ 4 ಮನೆಗಳ ಛಾವಣಿ ಹಾನಿಗೀಡಾಗಿ, 2 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಬಳಿ ಇರುವ ಜನತಾ ಕಾಲೋನಿಯ ನಿವಾಸಿಗರಾದ ಐತ್ತಪ್ಪ, ಇಸುಬು, ಬಾಬು ಆಚಾರಿ, ಲೋಕೇಶ್ ಎಂಬುವರ ಮನೆಯ ಮೇಲ್ಛಾವಣಿ ಗಾಳಿಯ ವೇಗಕ್ಕೆ ಸಿಲುಕಿ ಹಾನಿಗೀಡಾಗಿದ್ದು, ಸಮೀಪದಲ್ಲಿದ್ದ ಎರಡು ವಿದ್ಯುತ್ ಕಂಬಗಳುಮುರಿದಿವೆ. ಘಟನಾ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net