ಕಣ್ಣೀರು ಹಾಕುತ್ತಲೇ ಕೋವಿಡ್​ ಆಸ್ಪತ್ರೆಗೆ ಹೋದ 3 ವರ್ಷದ ಬಾಲಕ...

corona
Published on

ಕೊಪ್ಪಳ: ಆಟವಾಡಿಕೊಂಡು ಅಮ್ಮನ ಮಡಿಲಲ್ಲೇ ಮಲಗಿರಬೇಕಾದ ಪುಟ್ಟ ಕಂದಮ್ಮನಿಗೆ ತನ್ನಿಂದ ಅಮ್ಮನನ್ನು ಯಾಕೆ ದೂರ ಮಾಡುತ್ತಿದ್ದಾರೆಂಬ ಪರಿವಿಲ್ಲ.... ಅಳುತ್ತಲೇ ಕೋವಿಡ್​ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾನೆ.

ಇದು ಗಂಗಾವತಿಯಲ್ಲಿ ಕರೊನಾ ಸೋಂಕಿನಿಂದ ಬಳಲುತ್ತಿರುವ ಮೂರು ವರ್ಷದ ಗಂಡು ಮಗುವಿನ ಕಥೆ. ಆಡಿಕೊಂಡು ಇರಬೇಕಿದ್ದ ಮಗುವಿಗೆ ಸೋಂಕು ಕಾಣಿಸಿಕೊಂಡಿದ್ದು, ಹೆತ್ತವರನ್ನು ದುಃಖಕ್ಕೆ ತಳ್ಳಿದೆ. ಎರಡ್ಮೂರು ವರ್ಷ ಮುಂಬೈನಲ್ಲಿದ್ದ ದಂಪತಿ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದರು. ಇಲ್ಲೂ ಬೆನ್ನು ಬಿಡದ ಮಹಾಮಾರಿ, ಅಲ್ಲಿಂದ ಬರುವ ವೇಳೆಗೆ ಮಗುವನ್ನು ಆಕ್ರಮಿಸಿದೆ. ಇದನ್ನೂ ಓದಿರಿ ಇಲ್ಲಿಗೆ ಬಂದ್ರೆ ಕರೊನಾ ಸೋಂಕು ಗ್ಯಾರಂಟಿ..? ಅಧಿಕಾರಿಗಳ ಎಡವಟ್ಟಿಗೆ ಬಲಿಯಾಗದಿರಿ!​

ಪಾಲಕರೊಂದಿಗೆ ಮಗು ಜೂ.9ರಂದು ಗಂಗಾವತಿಗೆ ಬಂದಿದ್ದು, ಹುಷಾರಿಲ್ಲದ ಕಾರಣ ಚಿಕಿತ್ಸೆ ಕೊಡಿಸಿದ್ದಾರೆ. ರೋಗ ಲಕ್ಷಣ ಇದ್ದ ಕಾರಣ ಗಂಟಲು ದ್ರವವನ್ನು ಕಳಿಸಲಾಗಿತ್ತು. ಸೋಮವಾರ ಸೋಂಕು ದೃಢಪಟ್ಟಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಪ್ರತ್ಯೇಕವಾಗಿರಲು ತಾಯಿಗೆ ಆಸ್ಪತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಊಟ, ತಿಂಡಿ ಮಾಡಿಸಲು, ಇತರ ಸಹಾಯಕ್ಕಾಗಿ ಮಗುವಿಗೆ ತಾಯಿಯ ಅವಶ್ಯಕತೆಯಿದೆ. ಆದರೆ, ಅವರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಮವಾರ ಮಗು ಸೇರಿ ನಾಲ್ವರಿಗೆ (ಇಬ್ಬರು ಪುರುಷರು, ಒಬ್ಬ ಮಹಿಳೆ) ಸೋಂಕು ತಗುಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net