

ಬಳ್ಳಾರಿ: ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದ ಮಗನಿಗೆ ಕರೊನಾ ಬಂತೆಂದು ಆತನನ್ನು ಮನೆಗೆ ಕರೆಸಿಕೊಂಡು ಗುಣಮುಖವಾಗುವಂತೆ ಮಾಡಿದ್ದ ತಾಯಿಗೆ, ತಂಗಿ ಮತ್ತು ತಂದೆಗೆ ಕರೊನಾ ಸೋಂಕು ತಗುಲಿ ಮೂವರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕುರುಗೋಡು ತಾಲೂಕಿನಲ್ಲಿ ನಡೆದಿದೆ.
ಕುರಗೋಡು ತಾಲೂಕಿನ ಮದಿರೆ ಗ್ರಾಮದದಲ್ಲಿ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ತಿಪ್ಪೇಸ್ವಾಮಿ ಹೆಸರಿನ ಯುವಕ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಕರೊನಾ ಸೋಂಕು ದೃಢವಾಗಿತ್ತು. ಆತನನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈ ಮಧ್ಯೆ ಆತನಿಂದಾಗಿ ಆತನ ತಾಯಿ ಸುನೀತಮ್ಮ(45) ಮತ್ತು ತಂಗಿ ನಂದಿನಿ(18)ಗೂ ಸೋಂಕು ತಗುಲಿದೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ತಂದೆ ರುದ್ರಪ್ಪ(56) ಕೂಡ ಸೋಂಕಿಗೆ ತುತ್ತಾಗಿದ್ದಾರೆ.
ರುದ್ರಪ್ಪನೂ ಸೋಂಕಿನಿಂದಾಗಿ ತೀವ್ರವಾಗಿ ಬಳಲಿ ಪ್ರಾಣ ಬಿಟ್ಟಿದ್ದಾರೆ. ಇದೀಗ ಗುಣಮುಖವಾಗಿರುವ ತಿಪ್ಪೇಸ್ವಾಮಿ ಮನೆಯಲ್ಲಿ ಏಕಾಂಗಿಯಾಗಿದ್ದಾನೆ.