

ಕೈವ್ : ಯೂಕ್ರೇನ್ನ ಹೈಸ್ಕೂಲ್ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸಾವು ನೋವು ಸಂಭವಿಸಿದೆ. ಮೂವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈವ್‌ನ ಮಿಲಿಟರಿ ಆಡಳಿತ ಕೊಟ್ಟ ಮಾಹಿತಿಯ ಪ್ರಕಾರ, ಮೂವರು ಮೃತಪಟ್ಟಿದ್ದು, ಏಳು ಮಂದಿಗೆ ಗಾಯಗಳಾಗಿವೆ. ಒಬ್ಬನನ್ನು ರಕ್ಷಿಸಲಾಗಿದ್ದು, ಉಳಿದ ನಾಲ್ಕು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಕೈವ್‌ನ ದಕ್ಷಿಣಕ್ಕೆ 80 ಕಿಲೋಮೀಟರ್ (50 ಮೈಲುಗಳು) ನಲ್ಲಿರುವ ಪ್ರೌಢಶಾಲೆಯ ಈ ಮೇಲೆ ಡ್ರೋನ್ ದಾಳಿ ನಡೆದಿದೆ. ದಾಳಿಯಿಂದ ಹಾನಿಗೊಳಗಾದ ಕಟ್ಟಡಗಳ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ದಾಳಿಯಿಂದ ವಿದ್ಯಾರ್ಥಿ ನಿಲಯದ ಎರಡು ಮಹಡಿಗಳು ಹಾಗೂ ಅಧ್ಯಯನದ ಕೊಠಡಿಗಳು ಸಂಪೂರ್ಣ ನಾಶವಾಗಿವೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. 300 ಚ.ಮೀ. ವರೆಗೆ ಆವರಿಸಿದ್ದ ಬೆಂಕಿಯನ್ನು ಬೆಳಗ್ಗಿನ ಜಾವ 7 ಗಂಟೆಯ ಸುಮಾರಿಗೆ ನಂದಿಸಲಾಗಿದೆ.