ಬಾಂಗ್ಲಾದಲ್ಲಿ ಮುಂದುವರಿದ ಸಾವಿನ ಸರಣಿ: ಶೇಖ್​ ಹಸೀನಾ ಪಕ್ಷದ 29 ನಾಯಕರ ಮೃತದೇಹಗಳು ಪತ್ತೆ

Sheikh Hasina's

ಢಾಕಾ: ಬಾಂಗ್ಲಾದೇಶದಲ್ಲಿ ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಶೇಖ್​​ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಭಾರತಕ್ಕೆ ಬಂದಿಳಿದ ಬಳಿಕ ದೇಶಾದ್ಯಂತ ನಡೆದ ದಂಗೆಯಲ್ಲಿ ಶೇಖ್​ ಹಸೀನಾ ಅವರ ಅವಾಮಿ ಲೀಗ್​ ಪಕ್ಷದ ನಾಯಕರು ಮತ್ತು ಅವರ ಕುಟುಂಬದ ಸದಸ್ಯರ 29 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ.

ಹಸೀನಾ ಅವರು ಸೋಮವಾರ (ಆ.5) ರಾಜೀನಾಮೆ ನೀಡಿದರು. ಬಳಿಕ ಆಶ್ರಯ ಕೋರಿ ಭಾರತಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಬಾಂಗ್ಲಾದ ಸತ್ಖಿರಾದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಹಲವಾರು ಅವಾಮಿ ಲೀಗ್ ನಾಯಕರಿಗೆ ಸೇರಿದ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಲೂಟಿ ಮಾಡಲಾಗಿದೆ ಎಂದು ದಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಕ್ಯುಮಿಲ್ಲಾದಲ್ಲಿ ಜನಸಮೂಹ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ಮಾಜಿ ಕೌನ್ಸಿಲರ್ ಮೊಹಮ್ಮದ್ ಶಾ ಆಲಂ ಅವರ ಮೂರು ಅಂತಸ್ತಿನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಆರು ಮಂದಿ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಸೋಮವಾರ ಗುಂಪೊಂದು ಶಾ ಆಲಂ ಅವರ ಮನೆಯ ಮೇಲೆ ದಾಳಿ ಮಾಡಿದರು. ಈ ವೇಳೆ ರಕ್ಷಣೆಗೆಂದು ಕೆಲವರು ಮನೆಯ ಮೂರನೇ ಮಹಡಿಗೆ ಏರಿದರು. ದುಷ್ಕರ್ಮಿಗಳು ಮನೆಯ ನೆಲ ಮಹಡಿಗೆ ಬೆಂಕಿ ಹಚ್ಚಿದ ಪರಿಣಾಮ ಮೂರನೇ ಮಹಡಿಯಲ್ಲಿ ಆಶ್ರಯ ಪಡೆದಿದ್ದವರು ದಟ್ಟ ಹೊಗೆಯಿಂದಾಗಿ ಸಾವಿಗೀಡಾದ ಘಟನೆ ನಡೆದಿದೆ. ಈ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಬಾಂಗ್ಲಾ ಸಂಸದ ಶಫೀಕುಲ್ ಇಸ್ಲಾಂ ಶಿಮುಲ್ ಅವರ ಮನೆಗೆ ಗುಂಪೊಂದು ಮಂಗಳವಾರ ಬೆಂಕಿ ಹಚ್ಚಿದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದಾರೆ. ಶವಗಳು ಮನೆಯ ಹಲವಾರು ಕೊಠಡಿಗಳು, ಬಾಲ್ಕನಿಗಳು ಮತ್ತು ಛಾವಣಿಗಳಲ್ಲಿ ಪತ್ತೆಯಾಗಿವೆ. ಅವಾಮಿ ಲೀಗ್‌ನ ಯುವ ವಿಭಾಗವಾದ ಜುಬೊ ಲೀಗ್‌ನ ಇಬ್ಬರು ನಾಯಕರ ಶವಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಅವರಲ್ಲಿ ಜುಬಾ ಲೀಗ್ ನಾಯಕ ಮುಶ್ಫಿಕರ್ ರಹೀಮ್ ಅವರ ದೇಹವು ಸೋನಾಗಾಜಿ ಉಪಜಿಲಾದ ಸೇತುವೆಯ ಕೆಳಗೆ ಪತ್ತೆಯಾಗಿದೆ ಎಂದು ದಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಬೋಗ್ರಾದಲ್ಲಿ ಜನಸಮೂಹವೊಂದು ಜೂಬೋ ಲೀಗ್‌ನ ಇಬ್ಬರು ನಾಯಕರನ್ನು ಕೊಂದಿದೆ. ಸೋಮವಾರ ಲಾಲ್ಮೋನಿರ್ಹತ್‌ನಲ್ಲಿ ಜನಸಮೂಹ ಹಚ್ಚಿದ ಬೆಂಕಿಗೆ ಜಿಲ್ಲಾ ಅವಾಮಿ ಲೀಗ್ ಜಂಟಿ ಪ್ರಧಾನ ಕಾರ್ಯದರ್ಶಿ ಸುಮನ್ ಖಾನ್ ಅವರ ಮನೆಯಲ್ಲಿ ಆರು ಶವಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ದಂಗೆ ಉಲ್ಬಣಗೊಂಡಿದ್ದು ಈವರೆಗೂ ಮೃತಪಟ್ಟವರ ಸಂಖ್ಯೆ 400 ದಾಟಿದೆ. ಈ ಹಿಂಸಾಚಾರದಲ್ಲಿ ನೂರಾರು ಹಿಂದು ಮನೆಗಳು, ವ್ಯಾಪಾರಗಳು ಮತ್ತು ದೇವಾಲಯಗಳನ್ನು ಸುಟ್ಟುಹಾಕಲಾಗಿದೆ ಮತ್ತು ಧ್ವಂಸಗೊಳಿಸಲಾಗಿದೆ. ಈ ಘಟನೆಯ ಬಗ್ಗೆ ಭಾರತವು ಚಿಂತಿತವಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸಚಿವಾಲಯವು ಹೇಳಿದೆ.

ಪ್ರತಿಭಟನೆಗಳ ನಡುವೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಿದ ನಂತರ ಬಾಂಗ್ಲಾದೇಶದಲ್ಲಿ ಮಂಗಳವಾರ ಮಧ್ಯಂತರ ಸರ್ಕಾರ ರಚನೆಯಾಗಿದೆ. ಬಡವರ ಬ್ಯಾಂಕರ್ ಎಂದು ಕರೆಯಲ್ಪಡುವ 84 ವರ್ಷದ ಯೂನಸ್, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯಾಗಿದ್ದರು ಮತ್ತು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಿರ್ಣಾಯಕ ಸಭೆಯ ನಂತರ ಯೂನಸ್​ ಅವರ ನೇಮಕಾತಿ ನಡೆಯಿತು.

ಹಿಂಸಾಚಾರ ಭುಗಿಲೇಳಲು ಕಾರಣ ಏನು?
76 ವರ್ಷ ವಯಸ್ಸಿನ ಶೇಖ್ ಹಸೀನಾ ಕಳೆದ 20 ವರ್ಷಗಳಿಂದ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಪ್ರತಿಭಟನೆಯ ತೀವ್ರತೆ ಕಂಡು ಭಯಭೀತರಾಗಿ, ತಮ್ಮ ಪಿಎಂ ಕುರ್ಚಿಗೆ ರಾಜೀನಾಮೆ ಘೋಷಿಸಿ, ಸದ್ದಿಲ್ಲದಂತೆ ದೇಶ ತೊರೆಯುವ ಮುಖೇನ ಪಲಾಯನ ಮಾಡಿದ್ದಾರೆ. ಇಷ್ಟೆಲ್ಲಾ ಗಲಭೆಗೆ ಮೂಲ ಕಾರಣವೇ ವಿವಾದಾತ್ಮಕ ಸರ್ಕಾರಿ ಉದ್ಯೋಗ ಮೀಸಲಾತಿ. 1971ರ ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡವರ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30% ಮೀಸಲಾತಿ ನೀಡಲಾಗಿತ್ತು. ಅಂದಿನಿಂದಲೂ ಇದಕ್ಕೆ ದೊಡ್ಡ ಮಟ್ಟದಲ್ಲಿ ಅಪಸ್ವರ ಕೇಳಿಬಂದಿತ್ತು. ಆದ್ರೆ, ಯಾವಾಗ ಬಾಂಗ್ಲಾ ಸರ್ಕಾರ ಈ ಯೋಜನೆಯನ್ನು ಅವರ ಮುಂದಿನ ತಲೆಮಾರಿಗೂ ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಟ್ಟಿತೋ ಅಲ್ಲೇ ಮೊದಲ ಕಿಡಿ ಹತ್ತಿಕೊಂಡಿತು. 1971ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸ್ವಾತಂತ್ರ್ಯ ಯುದ್ಧದಲ್ಲಿ ಪಾಲ್ಗೊಂಡಿದ್ದವರ ಕುಟುಂಬದ ಸದಸ್ಯರಿಗೆ 30% ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಯೋಜನೆಯನ್ನು ಬಾಂಗ್ಲಾ ಸರ್ಕಾರ ಜಾರಿಗೊಳಿಸಿತ್ತು. ಈ ವ್ಯವಸ್ಥೆಯು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದೆ. ಪ್ರಧಾನಿ ಹಸೀನಾ ತನ್ನ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ವಾದಿಸುತ್ತಾರೆ. 1972ರಲ್ಲಿ ಸ್ಥಾಪಿಸಲಾದ ಕೋಟಾ ವ್ಯವಸ್ಥೆ ಅವಾಮಿ ಲೀಗ್ ಬೆಂಬಲಿಗರಿಗೆ ಸಹಾಯವಾಗುವಂತೆ ಜಾರಿಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಭಾರೀ ಅನ್ಯಾಯವಾಗಿದೆ ಮತ್ತು ಇತರ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಿತಿಗೊಳಿಸಲಾಗುತ್ತಿದೆ. ಕಷ್ಟಪಟ್ಟು ಮುಂದೆ ಬರುವವರಿಗೆ ಈ ಮೀಸಲಾತಿ ಅವಕಾಶ ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಹಸೀನಾ ನೀಡಿದ ಸಾರ್ವಜನಿಕ ಹೇಳಿಕೆಗಳೇ ಇದೀಗ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣ ಎಂಬುದರಲ್ಲಿ ಕಿಂಚಿತ್ತು ಅನುಮಾನವಿಲ್ಲ.

ಪ್ರತಿಭಟನೆ ಸ್ಪೋಟಗೊಂಡಿದ್ದು ಯಾವಾಗ?
ಕಳೆದ ಕೆಲವು ದಿನಗಳಿಂದ ಈ ವಿಷಯವಾಗಿ ಪ್ರತಿಭಟನಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ತೀವ್ರ ಘರ್ಷಣೆ ನಡೆಯುತ್ತಿತ್ತು. ಸರ್ಕಾರದಿಂದ ಬಂದ ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿರುವ ಪ್ರತಿಭಟನಕಾರರು ನಿನ್ನೆ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಪ್ರಾರಂಭಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಗ್ಗೆ “ ತಾರತಮ್ಯ ವಿರೋಧಿ ವಿದ್ಯಾರ್ಥಿ ಸಂಘಟನೆ’ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲಿಗ ಸಂಘಟನೆಗಳಾದ ಅವಾಮಿ ಲೀಗ್ ಛಾತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರು ನುಗ್ಗಿದಾಗ ಗಲಾಟೆ ಆರಂಭವಾಗಿ ಹಿಂಸಾರೂಪ ಪಡೆಯಿತು. ತದನಂತರ ದೇಶದ ಇತರ ಭಾಗಗಳಿಗೂ ಹಬ್ಬಿತು. ನೂರಾರು ಸರ್ಕಾರಿ ವಾಹನಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿ, ಮೀಸಲಾತಿ ರದ್ದುಗೊಳಿಸುವಂತೆ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರಕ್ಕೆ ಮನವಿ ಈ ಮಧ್ಯೆ, ಹಿಂಸಾಚಾರವನ್ನು ರಾಜಕೀಯ ನಿರ್ಧಾರಗಳ ಮೂಲಕ ನಿಯಂತ್ರಣಕ್ಕೆ ತರುವಂತೆ ಕೆಲವು ಮಾಜಿ ಸೇನಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಪ್ರತಿಭಟನೆ ಢಾಕಾದ ಆಸ್ಪತ್ರೆ ಆವರಣದಲ್ಲಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು. ಪರಿಸ್ಥಿತಿ ನಿಯಂತ್ರಣಕ್ಕೆ ಯೋಧರನ್ನು ಬಳಸುವುದು ಬೇಡ ಎಂದು ದೇಶಾದ್ಯಂತ ಕರ್ಪೂ ಜಾರಿಗೊಳಿಸಲಾಗಿದ್ದು, ಇದೀಗ ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಎಸ್​ಎಫ್ ಪಡೆ ಹೈ ಅಲರ್ಟ್​ ಆಗಿ ಕಾರ್ಯನಿರ್ವಹಿಸುತ್ತಿದೆ. (ಏಜೆನ್ಸೀಸ್​)

ಬಾಂಗ್ಲಾ ಪ್ರಧಾನಿ ನಿವಾಸದಿಂದ ಕದ್ದ ಈ ಬ್ಯಾಗ್​ನ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರುವುದು ಖಚಿತ!

ನಿಂತೋಯ್ತಾ ಸಲಾರ್​-2? ಪ್ರಭಾಸ್​-ಪ್ರಶಾಂತ್​ ನೀಲ್​ ನಡೆಯಿಂದ ಶುರುವಾಯ್ತು ಹೀಗೊಂದು ಅನುಮಾನ!

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…