

ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಖ್ಯಾತ ಟಿ.ವಿ. ಚಾನೆಲ್ ಸಿಬಿಎಸ್2 ನಲ್ಲಿ ವರದಿಗಾರ್ತಿಯಾಗಿದ್ದ ಭಾರತ ಮೂಲದ ನೀನಾ ಕಪೂರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ರೋಚಕ ಘಟನೆಗಳನ್ನು ಆಧರಿಸಿ ಹಲವಾರು ಷೋಗಳನ್ನು ನಡೆಸಿಕೊಡುತ್ತಿದ್ದ ನೀನಾ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ. ಬಾಡಿಗೆ ಸ್ಕೂಟರ್‌ನಲ್ಲಿ ಇವರು ಪ್ರಯಾಣಿಸುತ್ತಿದ್ದರು.
26 ವರ್ಷದ ನೀನಾ, ಬೇರೊಬ್ಬ ವ್ಯಕ್ತಿಯೊಂದಿಗೆ ಈ ಬೈಕ್ ಅನ್ನು ಶೇರ್ ಮಾಡಿದ್ದರು. ಶೇರಿಂಗ್ ಆಧಾರದ ಮೇಲೆ ಬೈಕ್ ಬಾಡಿಗೆಗೆ ಪಡೆದಿದ್ದು. ಇವರು ಹಿಂದುಗಡೆ ಕುಳಿತಿದ್ದರು. ಇಬ್ಬರೂ ಹೆಲ್ಮೇಟ್ ಧರಿಸಿರದ ಹಿನ್ನೆಯಲ್ಲಿ ನೀನಾ ಮೃತಪಟ್ಟಿದ್ದು, ಗಾಡಿಯ ಚಾಲನೆ ಮಾಡುತ್ತಿರುವ ಯುವಕನಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಅಪಘಾತವಾದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ನೀನಾ ಮೃತಪಟ್ಟಿದ್ದರು ಎನ್ನಲಾಗಿದೆ.
ನ್ಯೂಟೌನ್ ನಿವಾಸಿಯಾಗಿದ್ದ ನಿನಾ ತಮ್ಮ ಅಜಯ್ ಮತ್ತು ತಂದೆಯೊಂದಿಗೆ ವಾಸವಿದ್ದರು. ಈ ಮೊದಲು ನೀನಾ ನ್ಯೂಸ್ 12ನಲ್ಲಿ ಕೆಲಸ ಮಾಡುತ್ತಿದ್ದರು. ರೋಚಕ ಸ್ಟೋರಿ ಮಾಡಲು ಎಂಥದ್ದೇ ಸಂಕಷ್ಟಗಳನ್ನೂ ಎದುರಿಸಲು ನೀನಾ ತಯಾರಿದ್ದರು. ಯಾವುದೇ ವಿಷಯದ ಆಳವಾದ ಅಧ್ಯಯನ ನಡೆಸಿ ಸುದ್ದಿ ಕೊಡುತ್ತಿದ್ದರು ಎಂದು ನ್ಯೂಸ್ ಚಾನೆಲ್‌ಗಳು ನೀನಾರ ಕಾರ್ಯವನ್ನು ನೆನಪಿಸಿಕೊಳ್ಳುತ್ತಿವೆ.
ಇದಕ್ಕಾಗಿಯೇ ಇವರನ್ನು ನೀನಾ ಕಪೂರ್ ಎನ್ನುವುದಕ್ಕಿಂತ ಬದಲಾಗಿ ಥ್ರಿಲ್ಲಿಂಗ್ ಸ್ಟೋರಿ ನೀನಾ ಎಂದೇ ಗುರುತಿಸಲಾಗುತ್ತಿತ್ತು ಎಂದು ಸಹೋದ್ಯೋಗಿಗಳು ಹೇಳುತ್ತಿದ್ದಾರೆ.