

Weight Loss: ಯಾವುದೇ ವ್ಯಕ್ತಿಯು ತೂಕ ಇಳಿಸಿಕೊಳ್ಳಲು ಮಾಡಬೇಕಾದ ಮೂಲ ಆಧಾರವೆಂದರೆ ನಿಯಮಿತ ವ್ಯಾಯಾಮಗಳು, ಆರೋಗ್ಯಕರ ಆಹಾರ ಸೇವನೆ ಮತ್ತು ಸಮತೋಲನ ಮತ್ತು ಶಿಸ್ತು ಮುಖ್ಯ. ಇಲ್ಲಿ ಆನ್ಯಾ ಪರಾಶರ್ ಎಂಬ ಮಹಿಳೆಯು ರಾತ್ರಿ ಪ್ರಯಾಣ, ಪಿಸಿಓಎಸ್ನಿಂದ ಬಳಲುತ್ತಿದ್ದರು ಸಹ ಒಂದು ವರ್ಷದಲ್ಲಿ 20 ಕೆಜಿ ತೂಕ ಇಳಿಸಿಕೊಂಡಿದ್ದು, ತೂಕ ಇಳಿಸಿಕೊಳ್ಳುವವರು ಇವರ ಸಲಹೆಗಳನ್ನು ತಿಳಿಯಬಹುದಾಗಿದೆ..
ಪೌಷ್ಟಿಕತಜ್ಞೆ ಆನ್ಯಾ ಪರಾಶರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚುವರಿ ತೂಕ ಇಳಿಸಿಕೊಳ್ಳಲು ಮತ್ತು ಮತ್ತೆ ಆಕಾರ ಪಡೆಯಲು ಅವರು ಸೇವಿಸಿದ "ಮೂರು ಸುಲಭ ಊಟಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇವರು ಮೊದಲಿಗೆ ತಮ್ಮ ದಿನವನ್ನು ನೀರಿನಿಂದ ಪ್ರಾರಂಭಿಸುತ್ತಾರೆ. ನಂತರ ಉಪಾಹಾರಕ್ಕಾಗಿ ಬಾಳೆಹಣ್ಣಿನ ಪ್ರೋಟೀನ್ ಸ್ಮೂಥಿಯನ್ನು ಸೇವಿಸುವುದಾಗಿ ಬಹಿರಂಗ ಪಡಿಸಿದರು. ತದನಂತರ ಕಚೇರಿಯಲ್ಲಿ ಕಪ್ಪು ಕಾಫಿಯನ್ನು ಕುಡಿದರು. ಇದಾದ ಬಳಿಕ ಅವರ ಊಟದ ಮೆನುವಿನಲ್ಲಿ ಬೇಸನ್ ಚೀಸ್ ಮತ್ತು ಒಂದು ಬಟ್ಟಲು ಮೊಸರು ಮತ್ತು ಕೆಲವು ಸೌತೆಕಾಯಿ ಹೋಳುಗಳನ್ನು ಸೇವಿಸುವ ವಿಡಿಯೋವನ್ನು ಮಾಡಿದ್ದರು.
ಇದಾದ ನಂತರ ಮಾತನಾಡಿದ ಆನ್ಯಾ ಪರಾಶರ್ ನನಗೆ ಮತ್ತೆ ಹಸಿವಾದಾಗ, ಸಂಜೆ ಹಣ್ಣುಗಳನ್ನು ತಿನ್ನುತ್ತೇನೆ" ಎಂದು ಒಪ್ಪಿಕೊಂಡರು. ರಾತ್ರಿ ಊಟದ ವಿಷಯದಲ್ಲಿ, ಅವರು ಸೋಯಾ ಭರ್ಜಿ ಮತ್ತು ಪ್ರೋಟೀನ್ ಟೋಸ್ಟ್ ಅನ್ನು "ಒಟ್ಟು 100 ಗ್ರಾಂ ಪ್ರೋಟೀನ್" ಸೇವಿಸುವುದಾಗಿ ತಿಳಿಸಿದ್ದಾರೆ.
* ಬಾಳೆಹಣ್ಣಿನ ಸ್ಮೂಥಿ: 47.5 ಗ್ರಾಂ ಪ್ರೋಟೀನ್
* ಬೇಸನ್ ಚೀಲಾ ಮತ್ತು ಗ್ರೀಕ್ ಮೊಸರು: 25 ಗ್ರಾಂ ಪ್ರೋಟೀನ್
* ಸೋಯಾ ಭುರ್ಜಿ ಮತ್ತು ಪ್ರೋಟೀನ್ ಟೋಸ್ಟ್: 30 ಗ್ರಾಂ ಪ್ರೋಟೀನ್
ಈ ಹಿಂದೆ, ಆನ್ಯಾ ಪರಾಶರ್ ಅವರು 7 ಆಹಾರ ವಿನಿಮಯಗಳನ್ನು ಮಾಡುವ ಮೂಲಕ ಕೆಲವು ತೂಕ ಇಳಿಸುವ ಸಲಹೆಗಳನ್ನು ನೀಡಿದ್ದರು. ಅವುಗಳೆಂದರೆ
1. ಮ್ಯಾಗಿ ನೂಡಲ್ಸ್ ಸೇವಿಸುವ ಬದಲು ತರಕಾರಿ ಮಿಶ್ರಣವನ್ನು ಸೇವಿಸಲು ಶಿಫಾರಸ್ಸು ಮಾಡಿದ್ದರು.
2. ತಂಪು ಪಾನೀಯಗಳ ಬದಲಿಗೆ, ಮನೆಯಲ್ಲಿ ತಯಾರಿಸಿದ ನಿಂಬೆ ಪಾನಕವನ್ನು ಸೇವಿಸಿರಿ
3. ಕುರುಕಲು ತಿಂಡಿ ಬದಲಿಗೆ ಸಾಂಪ್ರದಾಯಕವಾಗಿ ಹುರಿದ ಕಡಲೆಯನ್ನು ಆಯ್ಕೆ ಮಾಡಲು ಒತ್ತಾಯಿಸಿದರು.
4. ಪೌಷ್ಟಿಕತಜ್ಞರ ಪ್ರಕಾರ, ಪ್ಯಾಕೆಟ್ನಲ್ಲಿ ಸಿಗುವ ಸೂಪ್ಗಳ ಬದಲಿಗೆ ಮನೆಯಲ್ಲಿಯೇ ತಾಜಾ ಸೂಪ್ಗಳನ್ನು ತಯಾರಿಸಿ ಸೇವಿಸಬೇಕು ಎಂದಿದ್ದಾರೆ.
5. ಅವರು ಸಂಸ್ಕರಿಸಿದ ಸಕ್ಕರೆಯನ್ನು ಆಹಾರದಲ್ಲಿ ಸೇವಿಸುವುದರ ಬದಲಿಗೆ ಖರ್ಜೂರ ಅಥವಾ ಕೃತಕ ಸಿಹಿಕಾರಕಗಳನ್ನು ಸೇವಿಸಲು ತಿಳಿಸಿದ್ದಾರೆ.
6. ಅನಯಾ ಪ್ರಕಾರ, 2-3 ಘನಗಳ ಡಾರ್ಕ್ ಚಾಕೊಲೇಟ್ ಸಿಹಿತಿಂಡಿಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ ಎಂದಿದ್ದಾರೆ.
7. ಅಂತಿಮವಾಗಿ, ನೀವು ಆಹಾರ ಸೇವನೆಯಲ್ಲಿ ಬಿಳಿ ಬ್ರೆಡ್ನಿಂದ ಹುಳಿ ಬ್ರೆಡ್ಗೆ ಬದಲಾಯಿಸಬೇಕು ಎಂದು ಸಲಹೆ ನೀಡಿದರು. (ಏಜೆನ್ಸೀಸ್)
ಈ ತೂಕ ಇಳಿಸುವ ಸಲಹೆಗಳು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡಬಹುದಾದರೂ, ನಿಮ್ಮ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು.ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ