ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಜ್ಞಾನವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮದ ಪೂರ್ವತಯಾರಿ ಸಭೆ ಬಿಳಿನೆಲೆಯಲ್ಲಿ ಇತ್ತೀಚೆಗೆ ನಡೆಯಿತು.
ಕಡಬ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಮಾತನಾಡಿ, ತಾಲೂಕಿನ 25 ಜ್ಞಾನವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ವನ್ನು ಬಿಳಿನೆಲೆ ಶ್ರೀ ಗೋಪಾಲಕಷ್ಣ ಪ್ರೌಢಶಾಲೆಯಲ್ಲಿ ನ.24ರಂದು ಆಯೋಜಿಸಲಾಗಿದೆ. ಮಹಿಳಾ ವಿಚಾರಗೋಷ್ಠಿ, ಜಾನಪದ ನತ್ಯ ವೈಭವ, ರಂಗೋಳಿ ಸ್ಪರ್ಧೆ ಹಾಗೂ ಪುಷ್ಪಗುಚ್ಛ ತಯಾರಿ ಸ್ಪರ್ಧೆ ನಡೆಯಲಿದೆ. 750 ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ತಾಲೂಕಿನ ಆರು ವಲಯಗಳಿಂದ ತಲಾ ಒಂದರಂತೆ ಜ್ಞಾನವಿಕಾಸ ಮಹಿಳೆಯರೇ ತಯಾರಿಸಿದ ತಿಂಡಿ-ತಿನಿಸು, ಗೃಹಾಲಂಕಾರದ ವಸ್ತು ಹಾಗೂ ವಸ್ತ್ರ ವಿನ್ಯಾಸ ಪರಿಕರ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶವಿದೆ ಎಂದರು.
ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು, ಕೋಣಾಜೆ ಒಕ್ಕೂಟದ ಅಧ್ಯಕ್ಷ ಡೀಕಯ್ಶ ಗೌಡ, ಕೊಂಬಾರು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ, ನೆಕ್ಕಿಲಾಡಿ ಒಕ್ಕೂಟದ ಅಧ್ಯಕ್ಷ ವಿನಯಕುಮಾರ್, ಕೈಕಂಭ ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಗೌಡ, ಮರ್ದಾಳ ಶೌರ್ಯ ಘಟಕದ ಘಟಕ ಪ್ರತಿನಿಧಿ ಭವಾನಿಶಂಕರ, ಬಿಳಿನೆಲೆ ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ಉಷಾ ಸತೀಶ್, ವಲಯದ ಸೇವಾಪ್ರತಿನಿಧಿಗಳಾದ ಬೇಬಿ ಕೊಣಾಜೆ, ವಿನೋದ್ ಕೆ.ಸಿ.ಸಿರಿಬಾಗಿಲು, ಭವ್ಯಾ, ರೇಖಾ, ಗಣೇಶ್ ಐತ್ತೂರು, ಜ್ಞಾನ ಸೆಲ್ವಿ, ದಿನೇಶ್ ನೆಕ್ಕಿಲಾಡಿ, ನೇತ್ರಾ ಬೊಳ್ಳೂರು ಉಪಸ್ಥಿತರಿದ್ದರು. ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್ ಆಜಾನ ವಂದಿಸಿದರು.