

ಉಪ್ಪಿನಂಗಡಿ: ನೆಚ್ಚಿನ ಗುರುಗಳ ಶಸ್ತ್ರಚಿಕಿತ್ಸೆಗೆ ರಕ್ತದ ಅವಶ್ಯಕತೆ ತಲೆದೋರಿದಾಗ ವಿದ್ಯಾರ್ಥಿ ಸಮೂಹದ ತ್ವರಿತ ಸ್ಪಂದನೆಯಿಂದ 24 ಯುನಿಟ್ ರಕ್ತ ಒದಗಿಸುವ ಮೂಲಕ ಗುರುಗಳ ಮೇಲಿನ ಪ್ರೀತಿಯನ್ನು ಚಿರಸ್ಥಾಯಿಗೊಳಿಸಿದ ಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿದ್ದ ಪ್ರಸಕ್ತ ಬೆಳ್ತಂಗಡಿ ತಾಲೂಕಿನ ಪ್ರೌಢಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರೊಬ್ಬರಿಗೆ ಶಸ್ತ್ರಚಿಕಿತ್ಸೆ ಬುಧವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿತ್ತು. ಈ ವೇಳೆ ತುರ್ತಾಗಿ 24 ಯುನಿಟ್ ರಕ್ತದ ಅವಶ್ಯಕತೆ ತಲೆದೋರಿದ್ದು, ಕಂಗೆಟ್ಟ ಶಿಕ್ಷಕರ ಕುಟುಂಬ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತರಿಗೆ ವಿಷಯ ತಿಳಿಸಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಯು.ಮಹಮ್ಮದ್ ಮುಸ್ತಾಫ, ಅಬೂಬಕ್ಕರ್ ಸಿದ್ದಿಕ್, ಹಾರೂನ್ ರಶೀದ್ ಮೊದಲಾದ ಸಾವಾಜಿಕ ಕಾಳಜಿಯಯು ಯವಕರು ಮಂಗಳೂರಿನ ತಮ್ಮ ಸ್ನೇಹಿತ ಬಳಗವನ್ನು ಸಂಪರ್ಕಿಸಿದ್ದು, ತುರ್ತಾಗಿ 24 ಯುನಿಟ್ ರಕ್ತವನ್ನು ಆಸ್ಪತ್ರೆಗೆ ತೆರಳಿ ನೀಡುವ ಮೂಲಕ ನೆಚ್ಚಿನ ಗುರುಗಳ ಜೀವರಕ್ಷಣೆಗೆ ನೆರವಾಗಿದ್ದಾರೆ.
ಶಿಕ್ಷಕರ ಜೀವರಕ್ಷಣೆಗೆ ಕ್ಷಣಾರ್ಧದಲ್ಲಿ ಸಂಟಿತ ಪ್ರಯತ್ನ ನಡೆಸಿದ ಯುವಕರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾನೆಗೆ ವ್ಯಕ್ತವಾಗಿದೆ.