ಭಾರತದಲ್ಲಿ ರೈಲು ಓಡಿಸೋಕೆ ವಿದೇಶಿ ಕಂಪನಿಗಳಿಂದಲೂ ಆಸಕ್ತಿ; 23 ಸಂಸ್ಥೆಗಳಿಂದ ಬಿಡ್​

Semi high speed rail
Published on

ನವದೆಹಲಿ: ವಿಮಾನ ಹಾಗೂ ರೈಲ್ವೆ ತಯಾರಿಕಾ ಕಂಪನಿ ಕೆನಡಾದ ಬೊಂಬಾರ್ಡಿಯರ್​, ಫ್ರಾನ್ಸ್​ನ ರೈಲ್ವೆ ದಿಗ್ಗಜ ಅಲ್​ಸ್ಟಾಮ್​ ಹಾಗೂ ಜರ್ಮ ನಿಯ ದೈತ್ಯ ಸೀಮನ್ಸ್​ ಕಂಪನಿಗಳು ಭಾರತದಲ್ಲಿ ರೈಲು ಓಡಿಸೋಕೆ ಸಜ್ಜಾಗಿವೆ.

ದೇಶೀಯ ಸಾರ್ವಜನಿಕ ವಲಯದ ಕಂಪನಿಗಳಾದ ಬಿಎಚ್​​ಇಎಲ್​, ಎನ್​ಐಐಎಫ್​ ಕಂಪನಿಗಳು ಕೂಡ ನಾವೇನು ಕಮ್ಮಿಯಿಲ್ಲ ಎನ್ನುವಂತೆ ಈ ವಿದೇಶಿ ಕಂಪನಿಗಳೊಂದಿಗೆ ಪೈಪೋಟಿಗೆ ಇಳಿದಿವೆ.

ಖಾಸಗಿಯವರಿಗೂ ರೈಲು ಓಡಿಸಲು ಅವಕಾಶ ನೀಡಿ ಭಾರತೀಯ ರೈಲ್ವೆ ಇಲಾಖೆ ಕರೆದಿರುವ ಟೆಂಡರ್​ನಲ್ಲಿ 23ಕ್ಕೂ ಕಂಪನಿಗಳು ಆಸಕ್ತಿ ತೋರಿಸಿವೆ. ರೈಲನ್ನು ಖರೀದಿಸುವ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯುವ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಇಷ್ಟೆಲ್ಲ ಸಂಸ್ಥೆಗಳು ಟೆಂಡರ್​ನಲ್ಲಿ ಸ್ಪರ್ಧೆಗಿಳಿದಿವೆ ಎಂದು ವಿಶ್ಲೇಷಿಸಲಾಗಿದೆ.

ನಿರ್ವಹಣೆಯಲ್ಲಿ ಅತ್ಯಂತ ಸೂಕ್ತ ಎನಿಸುವ ಕಂಪನಿಗಳಿಗಷ್ಟೇ ಅವಕಾಶ ನೀಡಲಾಗುತ್ತದೆ ಜತೆಗೆ, ಪ್ರಯಾಣದ ಟಿಕೆಟ್​ ದರವನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಈ ಕಂಪನಿಗಳಿಗೆ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಇಎಂಎಲ್​, ಐಆರ್​ಸಿಟಿಸಿ, ಸಿಎಎಫ್​, ಸ್ಟರ್ಲೈಟ್​, ಭಾರತ್​ ಫೋರ್ಜ್​, ಜೆಕೆಬಿ ಇನ್​ಫ್ರಾ, ತಿತಾಘರ್​ ವ್ಯಾಗನ್ಸ್​ ಲಿಮಿಟೆಡ್​ ಮೊದಲಾದ ಕಂಪನಿಗಳು ಪ್ರಮುಖವಾಗಿವೆ.

ಖಾಸಗಿಯವರಿಗೆ ಅವಕಾಶ ನೀಡುವ ಮೂಲಕ ಈ ಕ್ಷೇತ್ರದಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಚಂಡಿಗಢ್​, ಜೈಪುರ, ದೆಹಲಿ, ಮುಂಬೈ, ಪಟನಾ, ಪ್ರಯಾಗ್​ರಾಜ್​, ಸಿಕಂದರಾಬಾದ್​, ಹೌರಾ, ಚೆನ್ನೈ ವಲಯಗಳಲ್ಲಿ ಖಾಸಗಿ ರೈಲುಗಳು ಸಂಚರಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net