More

    22ರ ಯುವಕ ಗಣೇಶೋತ್ಸವದಲ್ಲಿ ಕುಣಿಯುತ್ತ ಕುಸಿದು ಬಿದ್ದು ಸಾವು; ಹಠಾತ್ ಹೃದಯಾಘಾತಕ್ಕೆ ಮತ್ತೊಂದು ಬಲಿ

    ವಿಜಯನಗರ: ಹಠಾತ್ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಈ ಪಟ್ಟಿಗೆ ಇದೀಗ ಇನ್ನೊಂದು ಪ್ರಕರಣ ಸೇರ್ಪಡೆಗೊಂಡಿದೆ. 22ರ ಯುವಕ ಗಣೇಶೋತ್ಸವದಲ್ಲಿ ಕುಣಿಯುತ್ತ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ.

    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲನಿಯಲ್ಲಿ ಈ ದುರಂತ ಸಂಭವಿಸಿದೆ. ಜಮೀರ್ ಪಿಂಜಾರ (22) ಸಾವಿಗೀಡಾದ ಯುವಕ. ಈತ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕುಣಿಯುತ್ತ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ.

    ಬಿಎಸ್ಎನ್ಎಲ್ ಕಚೇರಿ ಬಳಿ ಮೆರವಣಿಗೆಯಲ್ಲಿ ಏಕಾಏಕಿ ಕುಸಿದು ಬಿದ್ದ ಈತನನ್ನು ತಕ್ಷಣವೇ ಯುವಕರು ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಮಾರ್ಗಮಧ್ಯೆ ಕೊನೆಯಸಿರೆಳೆದಿದ್ದಾನೆ. ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು, ಆ ಬಳಿಕವಷ್ಟೇ ಸಾವಿನ ಕುರಿತು ಖಚಿತ ಕಾರಣ ತಿಳಿದುಬರಲಿದೆ ಎನ್ನಲಾಗಿದೆ.

    ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಮುಂದಿನ ಕೆಲವು ವರ್ಷಗಳಲ್ಲಿ 7.6 ಕೋಟಿ ಸಾವು ಸಾಧ್ಯತೆ!

    ಕಾವೇರಿ ಹೋರಾಟದಲ್ಲೂ ಮೈತ್ರಿ: ಮಂಡ್ಯ ಬಂದ್​ಗೆ ಜೆಡಿಎಸ್​-ಬಿಜೆಪಿ ನಾಯಕರ ಸಾಥ್!

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts