More

    ವಯಸ್ಸು 21 ಆದ್ರೆ ಈಕೆ ಸಂಪಾದಿಸುತ್ತಿರೋದು ಬರೋಬ್ಬರಿ 81ಲಕ್ಷ ರೂಪಾಯಿ..! 4 ತಿಂಗಳು ಕೆಲಸವೇ ಇರೋದಿಲ್ಲ..!

    ಪ್ರಪಂಚದಲ್ಲಿ ಶ್ರೀಮಂತ ವ್ಯಕ್ತಿ ಆಗಬೇಕೆಂಬ ಕನಸು ಸಾಕಷ್ಟು ಜನರದ್ದಾಗಿರುತ್ತೆ. ಅಂತೆಯೇ ಅದನ್ನ ನನಸು ಮಾಡಿಕೊಳ್ಳುವ ಸಲುವಾಗಿ ಹಗಲು-ರಾತ್ರಿ ದುಡಿಯೋಕೆ ಮುಂದಾಗ್ತಾರೆ. ಆದ್ರೆ ಇಲ್ಲೊಂದು ಶಾಕಿಂಗ್​​ ವಿಚಾರ ಹೊರಬಿದ್ದಿದೆ.

    ವಯಸ್ಸು 21 ವರ್ಷ, ಆದರೆ ಅವಳ ಸಂಬಳ ಬರೋಬ್ಬರಿ 81 ಲಕ್ಷ ರೂಪಾಯಿ. ಆಸ್ಟ್ರೇಲಿಯಾದ ಈ ಹುಡುಗಿಯ ಸಂಬಳವನ್ನು ಕೇಳಿದ ನಂತರ ನಿಮಗೂ ಅದೇ ಅನ್ನಿಸಬಹುದು. ಆದ್ರೆ ಈಕೆ ಮಾಡುವ ಕೆಲಸವನ್ನ ಯಾರೂ ಮಾಡೋಕೆ ಬಯಸೋದಿಲ್ಲ. ಜತೆಗೆ ಈ ಕೆಲಸವನ್ನ ಮಾಡೋದು ಹಡುಗರೇ ಮುಂದಾಗೋದಿಲ್ಲ.
    ಯುವತಿ ಮಾಡುತ್ತಿರೋ ಕೆಲಸವಾಸದ್ರೂ ಏನು?

    ತಾಲಿಯಾ ಜೇನ್ ಎಂಬ 21 ವರ್ಷ ವಯಸ್ಸಿನ ಹುಡುಗಿ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ವಾಸಿಸುತ್ತಿದ್ದಾರೆ. 21 ವರ್ಷ ವಯಸ್ಸಿನ ಈ ಯುವತಿ, ಆಸಟ್ರೇಲಿಯಾದ ಗಣಿಗಾರಿಕಾ ಪ್ರದೇಶದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆಯನ್ನ ಮಾಡೋಕೆ ಮುಂದಾಗಿದ್ದಾಳೆ.

    ತಾಲಿಯಾ ಜೇನ್ 84 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದು, ಗಣಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಆಸ್ಟ್ರೇಲಿಯನ್ ಗಣಿಗಳಲ್ಲಿ ಅಡುಗೆ ಮಾಡುವ ಕಂಪನಿಯಾದ Sodexo ಗಾಗಿ FIFO (ಫ್ಲೈ-ಇನ್, ಫ್ಲೈ-ಔಟ್) ಯುಟಿಲಿಟಿ ಪಾತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆ ಗಣಿಗಳ ಒಳಗೆ ಹೋಗಿ ಟೈರ್ ಫಿಟ್ಟಿಂಗ್ ಕೆಲಸ ಮಾಡುತ್ತಾಳೆ. ಟೈರ್ ಫಿಟ್ಟರ್ ಎಂದರೆ ಗಣಿಗಾರಿಕೆ ಮಾಡುವ ಯಂತ್ರಗಳ ಟೈರ್‌ಗಳನ್ನು ಸರಿಪಡಿಸಲು ಕೆಲಸ ಮಾಡುವ ಕೆಲಸ. ಈ ಕೆಲಸದಲ್ಲಿ ಸಾಕಷ್ಟು ಅಪಾಯವಿದೆ, ಜೀವಕ್ಕೂ ಕುತ್ತು ಇದೆ. ಇದರಿಂದಲೇ ಈ ಉದ್ಯೋಗಕ್ಕೆ ಸಂಬಳ ಹೆಚ್ಚು.

    ತಾಲಿಯಾ ಜೇನ್ ವರ್ಷಕ್ಕೆ 84 ಲಕ್ಷ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ. ಗಣಿಗಳು ಹೆಚ್ಚಾಗಿ ಕುಸಿದು ಬೀಳುವುದರಿಂದ ಅನೇಕ ಜನರು ಈ ಕೆಲಸವನ್ನು ಮಾಡಲು ನಿರಾಕರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts