ಸಂಬಂಧಿಯನ್ನು ನಂಬಿ ಮಕ್ಕಳನ್ನು ಬಿಟ್ಟು ಹೋದ ದಂಪತಿಗೆ ವಾಪಸ್​ ಬರುವಷ್ಟರಲ್ಲಿ ಕಾದಿತ್ತು ಆಘಾತ

Relative
Published on

ಭೋಪಾಲ್​: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಪರಿಣಾಮಕಾರಿ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದರೂ ಕೂಡ ಅಪರಾಧಗಳು ನಡೆಯುತ್ತಲೇ ಇವೆ. ಇನ್ನೂ ಸರಿಯಾಗಿ ಮಾತು ಬಾರದ ಪುಟ್ಟ ಮಕ್ಕಳ ಮೇಲೆ ಕೂಡ ಕಾಮುಕತೆ ತೋರುವವ ಪಾಪಿಗಳು ಇದ್ದಾರೆ.

ಇದೀಗ 19 ವರ್ಷದ ಯುವಕನೋರ್ವ ಎರಡು ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ.ಈ ಯುವಕ ದಾಮೋಹ್​​ನಲ್ಲಿರುವ ತನ್ನ ಸಂಬಂಧಿಯ ಮನೆಗೆ ಭೇಟಿ ನೀಡಿದ್ದ. ಆ ಮನೆಯ ದಂಪತಿ ತಮ್ಮಿಬ್ಬರು ಹೆಣ್ಣು ಮಕ್ಕಳನ್ನು ಮನೆಯಲ್ಲಿ ಬಿಟ್ಟು, ತರಕಾರಿ ತರಲೆಂದು ಮಾರ್ಕೆಟ್​​ಗೆ ಹೋಗಿದ್ದರು. ಒಂದು ಮಗು ಕೇವಲ 2 ವರ್ಷದ್ದು, ಇನ್ನೊಂದು ಅದಕ್ಕಿಂತಲೂ ದೊಡ್ಡದು. ದಂಪತಿ ವಾಪಸ್​ ಬರುವಷ್ಟರಲ್ಲಿ ಪುಟ್ಟ ಮಗು ನೆಲದ ಮೇಲೆ ಬಿದ್ದಿತ್ತು. ಗಾಯಗಳಾಗಿದ್ದವು. ಇನ್ನೋರ್ವ ಮಗಳು ತಂದೆ-ತಾಯಿಗೆ ಘಟನೆಯನ್ನು ವಿವರಿಸಿದ್ದಾಳೆ. ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ 100ರ ಗಡಿ ದಾಟಿದ್ರೂ ಚಿಂತಿಸಬೇಡಿ, ಈ ಟಿಪ್ಸ್​ ಫಾಲೋ ಮಾಡಿ!

ಅಷ್ಟರಲ್ಲಾಗಲೇ ಆರೋಪಿ ಯುವಕ ತಪ್ಪಿಸಿಕೊಂಡಿದ್ದ. ಘಟನೆಯ ಬಳಿಕ ಸಿಟ್ಟಾದ ಹಳ್ಳಿಗರು ಸ್ಥಳೀಯ ಠಾಣೆಯನ್ನು ಮುತ್ತಿದ್ದಾರೆ. ಆದರೂ ಆರೋಪಿಯನ್ನು ಹಳ್ಳಿಯ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಹೊರತು ಅವರಿಗೆ ಹಿಡಿಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net