

ಮುಂಬೈ: ಕರೊನಾದಿಂದಾಗಿ 25ಕ್ಕೂ ಹೆಚ್ಚು ದಿನಗಳನ್ನು ನಾನಾವತಿ ಆಸ್ಪತ್ರೆಯಲ್ಲಿ ಕಳೆದಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಇತ್ತೀಚೆಗಷ್ಟೇ ಗುಣಮುಖರಾಗಿ ಬಂದಿದ್ದಾರೆ. ಅಷ್ಟೇ ಅಲ್ಲ ಹೋಮ್ ಕ್ವಾರಂಟೈನ್ ಮುಗಿಸಿ ಕೌನ್ ಬನೇಗಾ ಕ್ರೋರ್ಪತಿ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಇದೀಗ ಮತ್ತೆ ಅಮಿತಾಬ್ಗೆ ಕರೊನಾ ಕಂಟಕ ಎದುರಾಗಿದೆ!
ಇದನ್ನೂ ಓದಿ: ಸಿಸಿಬಿ ಕಚೇರಿಗೆ ಆಗಮಿಸಿದ ರಾಗಿಣಿ …
ಇತ್ತೀಚಿನ ಕೆಲ ದಿನಗಳಿಂದ ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಈ ನಡುವೆ ಸಿನಿಮಾ ಮತ್ತು ಸಿರೀಯಲ್ ಚಿತ್ರೀಕರಣಗಳಿಗೂ ಚಾಲನೆ ನೀಡಲಾಗಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡೇ ಮುಂದುವರಿಯುವಂತೆ ಸೂಚನೆ ನೀಡಲಾಗಿದೆ. ಇದೆಲ್ಲದರ ನಡುವೆಯೇ ಅಮಿತಾಬ್ ಬಚ್ಚನ್ ಪಾಲ್ಗೊಂಡಿರುವ ಕೆಬಿಸಿ ಶೂಟಿಂಗ್ನಲ್ಲಿನ ಕೆಲ ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಸದ್ಯ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ಈಗಾಗಲೇ ಅದರಿಂದ ಗುಣಮುಖವಾಗಿ ಬಂದಿರುವ ಅಮಿತಾಬ್ ಅವರಿಗೂ ಏನಾದರೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಸೆಟ್ನ ಇಬ್ಬರಿಗೆ ಕರೊನಾ ಇರುವುದು ದೃಢಪಟ್ಟಿದ್ದು, ಇನ್ನುಳಿದವರ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.
ಇತ್ತ ಮಲೈಕಾ ಅರೋರಾ ತೀರ್ಪುಗಾರರಾಗಿ ನಡೆಸಿಕೊಡುವ ಕಾರ್ಯಕ್ರಮ ಬೆಸ್ಟ್ ಡಾನ್ಸರ್ ಶೋದ ಏಳೆಂಟು ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಸದ್ಯ ಹಾಗೇ ಪಾಸಿಟಿವ್ ವರದಿ ಬಂದ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಇನ್ನುಳಿದವರೂ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. (ಏಜೆನ್ಸೀಸ್)