ಸುಮ್ಮನೆ ನನ್ನನ್ನ ಏಕೆ ಈ ವಿಷ್ಯಕ್ಕೆ ಎಳೆಯುತ್ತೀರಾ? ಸಂಜನಾ ಪ್ರಶ್ನೆ

Sanjana Galrani - Final
Published on

ಡ್ರಗ್ಸ್​ ವಿಷಯದಲ್ಲಿ ನಟಿ ಸಂಜನಾ ತಮಗೆ ಯಾವ ನೋಟೀಸ್​ ಸಹ ಬಂದಿಲ್ಲ ಎಂದು ಗುರುವಾರವಷ್ಟೇ ಹೇಳಿದ್ದರು. ಹಾಗೆಯೇ ಈ ವಿಷಯದಲ್ಲಿ ಹಲವರು ತಮಗೆ ಕರೆ ಮಾಡುತ್ತಿದ್ದು, ಯಾರ ಕರೆಗೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹಾಗಂತ ತಾನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದ್ದರು.

ಈ ವಿಷಯವಾಗಿ ಅವರು ಇಂದು ಇನ್ನಷ್ಟು ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ದಯವಿಟ್ಟು ಸ್ಯಾಂಡಲ್ ವುಡ್ ಸ್ಟಾರ್ಗಳು ಎಂದು ಬಳಸಬೇಡಿ. ಸಿಸಿಬಿಯವರು ಯಾರಿಗೆ ನೋಟೀಸ್​ ಕೊಟ್ಟಿದ್ದಾರೋ, ಅವರ ಹೆಸರನ್ನು ಮಾತ್ರ ಬಳಸಿ' ಎಂದು ಹೇಳಿದ್ದಾರೆ.

ಕಳೆದ ವರ್ಷ ಹೋಟೆಲ್ನಲ್ಲಿ ಗಲಾಟೆ ಆದ ಬಳಿಕ ನಾನು ಯಾವುದೇ ಪಾರ್ಟಿಗೆ ಹೋಗಿಲ್ಲ ಎಂದಿರುವ ಸಂಜನಾ, 'ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಕಳೆದ ಡಿಸೆಂಬರ್ ಆದಮೇಲೆ ನಾನು ಪಾರ್ಟಿಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ಅಷ್ಟೇ ಅಲ್ಲ, ಈ ಹಿಂದೆ ನಾನು ಅಟೆಂಡ್​ ಮಾಡಿರುವ ಪಾರ್ಟಿಗಳಲ್ಲೂ ಡ್ರಗ್ಸ್​ ಇರಲಿಲ್ಲ.

ಇನ್ನು ರಾಹುಲ್​ ಬಗ್ಗೆ ಮಾತನಾಡಿರುವ ಅವರು, 'ರಾಹುಲ್ ನನಗೆ ಚೆನ್ನಾಗಿ ಗೊತ್ತು, ಅವರ ತಂದೆ ತಾಯಿ ಕೂಡ ತುಂಬಾ ಒಳ್ಳೆಯವರು. ಮೂರ್ನಾಲ್ಕು ವರ್ಷಗಳಿಂದ ರಾಹುಲ್ ಪರಿಚಯವಿದೆ. ನನಗಷ್ಟೇ ಅಲ್ಲ, ಸಾಕಷ್ಟು ಸಿನಿಮಾ ಸ್ಟಾರ್ಗಳಿಗೆ ಅವರ ಪರಿಚಯ ಇದೆ. ರಾಹುಲ್ ತುಂಬಾ ಒಳ್ಳೆಯ ಹುಡುಗ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net