VIDEO| ಗಲಭೆ ಪೀಡಿತ ನೂಹ್​ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಅಂಗಡಿ-ಮನೆಗಳನ್ನು ನೆಲಸಮ ಮಾಡಿದ ಸರ್ಕಾರ

JCB Action
Published on

ಹರಿಯಾಣ: ಕಳೆದ ಸೋಮವಾರ ವಿಶ್ವ ಹಿಂದೂ ಪರಿಷತ್​ ರ್‍ಯಾಲಿ ವೇಲೆ ಸಂಭವಿಸಿದ ಘರ್ಷಣೆಯಿಮದ ತತ್ತರಿಸಿರುವ ಹರಿಯಾಣದ ನೂಹ್​ ಜಿಲ್ಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇದರ ಪರಿಣಾಮವಾಗಿ 60ಕ್ಕೂ ಹೆಚ್ಚು ಅಂಗಡಿಗಳನ್ನು ನೆಲಸಮ ಮಾಡಲಾಗಿದೆ.

ನೂಹ್​ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಔಷಧಿ ಮಳಿಗೆಗಳನ್ನು ನೆಲಸಮ ಮಾಡಲಾಗಿದೆ. ಗುರುವಾರದಂದು ಆರಂಭವಾದ ಕಾರ್ಯಾಚರಣೆ ಶನಿವಾರವು ಮುಂದುವರೆದಿದೆ.

ಗಲಭೆ ಪೀಡಿತ ನೂಹ್​ ಜಿಲ್ಲೆಯಿಂದ ಸುಮಾರು 20 ಕಿಲೋಮೀಟರ್​ ದೂರದಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ತವಡು ಪ್ರದೇಶದಲ್ಲಿರುವ ಶಹೀನ್​ ಹಸನ್ ಖಾನ್​ ಮೆವಾತಿ ಸರ್ಕಾರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಅಂಗಡಿಗಳನ್ನು ಶನಿವಾರ ನೆಲಸಮ ಮಾಡಲಾಯಿತು.

ಜೆಸಿಬಿ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಶಾಸಕ ಅಫ್ತಾಬ್​ ಅಹ್ಮದ್​ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಡಳಿತ ಇಲ್ಲಿವರೆಗೂ 60ಕ್ಕೂ ಹೆಚ್ಚು ಅಂಗಡಿ ಹಾಗೂ ಮನೆಗಳನ್ನು ನೆಲಸಮ ಮಾಡಿದೆ. ಇವರು ಬಡವರ ಮನೆಗಳಷ್ಟೇ ಅಲ್ಲ ಅವರ ನಂಬಿಕೆಗಳನ್ನು ಸಹ ಹೊಡೆದು ಹಾಕುತ್ತಿದ್ದಾರೆ.

ಒಂದು ತಿಂಗಳ ಹಿಂದೆ ನೋಟಿಸ್​ ನೀಡಿ ಯಾವುದೇ ಕಾಲಾವಕಾಶ ಕೊಡದೆ ಈಗ ಏಕಾಏಕಿ ಮನೆ ಹಾಗೂ ಅಂಗಡಿಗಳನ್ನು ನೆಲಸಮ ಮಾಡುತ್ತಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಆಡಳಿತ ವೈಫಲ್ಯವನ್ನು ಮರೆಮಾಚಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಕಾಂಗ್ರೆಸ್​ ಶಾಸಕ ಅಫ್ತಾಬ್​ ಅಹ್ಮದ್​ ಕಿಡಿಕಾರಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net