ಕೋವಿಡ್​ ಆಸ್ಪತ್ರೆಯ ಅಗ್ನಿ ಅವಘಡಕ್ಕೆ ಇಬ್ಬರು ಬಲಿ: ಮಾಲ್ ಒಳಗೆ ಆಸ್ಪತ್ರೆ ನೋಡಿದ್ದು ಇದೇ ಮೊದಲೆಂದ ಮೇಯರ್!

Malla 1
Published on

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿರುವ ಮಾಲ್​ ಒಂದರ ಒಳಗಿರುವ ಕೋವಿಡ್​-19 ಆಸ್ಪತ್ರೆಯಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಇಬ್ಬರು ಮೃತಪಟ್ಟಿದ್ದು, 6 ಮಂದಿ ಅಲ್ಲಿಯೇ ಸಿಲುಕಿರುವ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮುಂಬೈನ ಭಂಡಪ್​ನಲ್ಲಿರುವ ಡ್ರೀಮ್ಸ್​ ಮಾಲ್​ನ ಮೂರನೇ ಮಹಡಿಯಲ್ಲಿರುವ ಸನ್​ರೈಸ್​ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಒಳಗೆ ಇನ್ನು 6 ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಮುಂಬೈ ಮೇಯರ್​, ಬೆಂಕಿಗೆ ಖಚಿತ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಇದೇ ಮೊದಲ ಬಾರಿಗೆ ಮಾಲ್​ ಒಳಗೆ ಆಸ್ಪತ್ರೆಯನ್ನು ನೋಡುತ್ತಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್​ ಮಾಹಿತಿ ನೀಡಿದರು.

ಆಸ್ಪತ್ರೆಗೆ ಒಟ್ಟು 76 ರೋಗಿಗಳು ದಾಖಲಾಗಿದ್ದರು. ಅದರಲ್ಲಿ 73 ಮಂದಿ ಕೋವಿಡ್​ ಸೋಂಕಿತರಾಗಿದ್ದರು. ಎಲ್ಲರನ್ನು ಬೇರೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net