ಒಂದು ವಾರ ಸ್ವಉದ್ಯೋಗ ಎಂಬ್ರಾಯ್ಡಿಂಗ್ ತರಬೇತಿ

embroiding
ಕೋಟ ಗ್ರಾಪಂ ಸಭಾಂಗಣದಲ್ಲಿ ಎಂಬ್ರಾಯ್ಡಿಂಗ್ ತರಬೇತಿ ಕಾರ್ಯಕ್ರಮವನ್ನು ಕೋಟ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಕೋಟ

ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಗುರುತಿಸಿಕೊಂಡಾಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಚಿನ್ ಹೆಗ್ಡೆ ಹೇಳಿದರು.

ಕೋಟ ಗ್ರಾಪಂ ಸಭಾಂಗಣದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ನೇತೃತ್ವದಲ್ಲಿ ಪ್ರಕೃತಿ ಸಂಜೀವಿ ಒಕ್ಕೂಟ, ಕೋಟ ಗ್ರಾಪಂ ಸಹಯೋಗದೊಂದಿಗೆ ಒಂದು ವಾರಗಳ ಸ್ವಉದ್ಯೋಗ ಎಂಬ್ರಾಯ್ಡಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತರಬೇತಿಯುಕ್ತ ಸ್ವಉದ್ಯೋಗದಲ್ಲಿ ಕೈಜೋಡಿಸಿಕೊಳ್ಳಬೇಕು. ಶಿಸ್ತು, ಶ್ರದ್ಧೆ ಇದ್ದರೆ ಬದುಕಿನಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ. ಪ್ರಸ್ತುತ ಸಾಮಾಜಿಕ ಜಾಲತಾಣದ ವ್ಯವಸ್ಥೆಯಲ್ಲಿ ಸ್ವಉದ್ಯೋಗದ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಬಹುದು ಎಂದರು.

ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಕೃತಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಮಾಲತಿ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಆರತಿರಾಜ್ ತರಬೇತುದಾರರಾಗಿದ್ದರು. ಕೋಟ ಬ್ಯಾಂಕ್ ಆಫ್ ಬರೋಡಾ ಶಾಖೆ ಪ್ರಬಂಧಕಿ ಸಹನಾ, ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು.

ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಉಪನ್ಯಾಸಕ ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಸಿದರು. ಪ್ರಕೃತಿ ಸಂಜೀವಿನಿ ಒಕ್ಕೂಟದ ಎಲ್‌ಸಿಆರ್‌ಪಿ ಭಾರತಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಸಂಜೀವಿನಿ ಒಕ್ಕೂಟದ ಲಲಿತಾ ಪೂಜಾರಿ ವಂದಿಸಿದರು. ಎಂ.ಬಿ.ಕೆ ಪ್ರೇಮಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net