19ರಿಂದ ಶ್ರೀಭಗವತೀ ಪೆರುಂಕಳಿಯಾಟ್ಟ

Published on

ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಜ.19ರಿಂದ 24ರ ತನಕ 351 ವರ್ಷಗಳ ಬಳಿಕ ಐತಿಹಾಸಿಕ ಪೆರುಂಕಳಿಯಾಟ್ಟ ನಡೆಯಲಿದೆ.

19ರಂದು ಬೆಳಗ್ಗೆ 7.30ಕ್ಕೆ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ದೀಪವನ್ನು ತರಲಾಗುವುದು. ಬಳಿಕ ಕುಂಟಾರು ವಾಸುದೇವ ತಂತ್ರಿ, ಕುಂಟಾರು ರವೀಶ ತಂತ್ರಿ ಅವರಿಗೆ ಪೂರ್ಣ ಕುಂಭ ಸ್ವಾಗತ, ಬೆಳಗ್ಗೆ ಧ್ವಜಾರೋಹಣದೊಂದಿಗೆ ಉತ್ಸವ ಆರಂಭವಾಗಲಿದೆ. ನಂತರ 23ರ ವರೆಗೆ ಧಾರ್ಮಿಕ ವಿಧಿ, ದೈವಗಳ ಉತ್ಸವ ನಡೆಯಲಿದೆ.24ರಂದು ಪೂರ್ವಾಹ್ನ ವೈರಾಪುರತ್ ವಡಕ್ಕಾನ್ ಕೋಡಿ ದೈವದ ಕೋಲ, ಅಸುರಾಳನ್ ದೈವದ ಕೋಲ, ನಂತರ ವಿವಿಧ ದೈವಗಳ ಕೋಲ ಹಾಗೂ 351 ವರ್ಷಗಳ ನಂತರ ಒಂದೇ ಪೀಠದಲ್ಲಿ ಆಸೀನರಾಗಿರುವ ನಿತ್ಯ ಕನ್ನಿಕೆಯರಾಗಿರುವ ಶ್ರೀ ಪುನ್ನಕ್ಕಲ್ ಭಗವತಿ, ಶ್ರೀ ಉಚ್ಚುಳಿಕಡವ್ ಭಗವತೀ, ಶ್ರೀ ಆಯಿಟ್ಟ ಭಗವತಿಯವರ ತಿರುಮುಡಿ ಏರುವುದು, ಕಾಸರಗೋಡು ಕಣ್ಣೀರತ್ ತರವಾಡು, ಕರೆಯಪ್ಪನ್ ಕಿರ್ಯ ಭಂಡಾರ ಮನೆ ತರವಾಡು, ಮೂತಿಲ್ಲಾಂ ತರವಾಡು ಎಂಬ ಮೂರು ತರವಾಡುಗಳಿಂದ ಮೀನಮೃತಾಕ್ಕೆ ಬೇಕಾದ ಮೀನ್ ಕೋವಾ ಮತ್ತು ಕಲಶ ಮೆರವಣಿಗೆ, ರಾತ್ರಿ 11ಕ್ಕೆ ಧ್ವಜಾವರೋಹಣ ನಡೆಯಲಿದೆ.

27 ಮತ್ತು ಜ.28ರಂದು ಕಾಸರಗೋಡು ನೆಲಿಕುಂಜೆ ಕಡಪ್ಪರ ಬಬ್ಬರ್ಯ ದೈವಸ್ಥಾನದಲ್ಲಿ ಬಬ್ಬರ್ಯ, ಮಾಣಿಚ್ಚಿ, ಗುಳಿಗ ದೈವಗಳ ಕೋಲ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net