ಆಶಾ ಕಾರ್ಯಕರ್ತೆಯರ ಬೇಡಿಕೆ ಮನವಿ

Btw_Asha
Published on

ಬಂಟ್ವಾಳ: ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಬಿ.ಎಂ.ಭಟ್​ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈಗ ನೀಡುತ್ತಿರುವ ಮಾಸಿಕ ವೇತನ 5 ಸಾವಿರವನ್ನು 26 ಸಾವಿರಕ್ಕೆ ಏರಿಸಬೇಕು. ಕೆಲಸದ ಭದ್ರತೆ, ಕನಿಷ್ಠ ವೇತನ, ನಿವೃತ್ತಿ ಯೋಜನೆ, ಗ್ರಾಚ್ಯುವಿಟಿ ಮತ್ತು ಪಿಂಚಣಿ ಜಾರಿಗೊಳಿಸಬೇಕು. ಸರ್ಕಾರಿ ನೌಕರರೆಂದು ಮಾನ್ಯ ಮಾಡಬೇಕು. ಆನ್​ಲೈನ್​ ಕೆಲಸ ಮಾಡಬೇಕಾದರೆ ಸ್ಮಾರ್ಟ್​ೋನ್​ ಮತ್ತು ಕರೆನ್ಸಿ ಒದಗಿಸಬೇಕು. ಆರೋಗ್ಯ ವಿಮೆ ನೀಡಬೇಕು. ಇಲಾಖೇತರ ಕೆಲಸಗಳನ್ನು ಆಶಾ ಕಾರ್ಯರ್ತೆಯರಿಗೆ ನೀಡಬಾರದು. ಪ್ರತಿ ಪಿ.ಎಚ್​.ಸಿ ಸೆಂಟರಲ್ಲಿ ಮತ್ತು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಒದಗಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಪ್ರಯಾಣ ವೆಚ್ಚ ಟಿ.ಎ., ಡಿ.ಎ. ನೀಡಬೇಕು. ಮೊದಲಾದ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಲಾಗಿದೆ. ಬಂಟ್ವಾಳ ತಾಲೂಕು ಅಧ್ಯಕ್ಷೆ ್ಲೋಸಿ ವಿಟ್ಲ, ಕಾರ್ಯದರ್ಶಿ ಸುಮತಿ, ಉಪಾಧ್ಯಕ್ಷೆ ರಂಜಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net