

ಉತ್ತರಪ್ರದೇಶದ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣವಾಗಿ ತತ್ತರಿಸಿದ್ದು, ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಇದೀಗ ಭಾರೀ ಮಳೆಯ ಹಿನ್ನೆಲೆ ನಗರದ ಶಾಲಾ-ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ 40 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದ್ದು, ಮೊರಾದಾಬಾದ್, ಸಂಭಾಲ್, ಕನೌಜ್, ರಾಂಪುರ್, ಹತ್ರಾಸ್, ಬಾರಾಬಂಕಿ, ಕಾಸ್ಗಂಜ್, ಬಿಜ್ನೋರ್, ಅಮ್ರೋಹಾ, ಬಹ್ರೈಚ್, ಲಕ್ನೋ, ಬದೌನ್, ಮೈನ್‌ಪುರಿ, ಹರ್ದೋಯ್, ಫಿರೋಜಾಬಾದ್, ಬರೇಲಿ, ಷಹಜಹಾನ್‌ಪುರ, ಕಾನ್ಪುರ್, ಸೀತಾಪುರ್, ಫರೂಕಾಬಾದ್, ಲಖೀಮ್‌ಪುರ್ ಕತೇರಿ, ಹರ್ದೋಯ್, ಬಾರಾಬಂಕಿ, ಪ್ರತಾಪ್‌ಗಢ, ಕನ್ನೌಜ್ ಅಮೇಥಿ, ಡಿಯೋರಿಯಾ, ಜಲೌನ್, ಕಾನ್ಪುರ, ಉನ್ನಾವ್, ಸಂಭಾಲ್, ರಾಂಪುರ್ ಮತ್ತು ಮುಜಾಫರ್‌ನಗರಗಳಿಂದ ಒಟ್ಟು 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ನೀಡಲು ಆದೇಶ ಹೊರಡಿಸಿದ ಸಿಎಂ ಯೋಗಿ ಆದಿತ್ಯನಾಥ್, ಸಂತ್ರಸ್ತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಮತ್ತು ದುರಂತದಿಂದ ಸಂತ್ರಸ್ತರಾದವರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್ಚುವರಿಯಾಗಿ, ಬೆಳೆ ಹಾನಿಯ ಮೌಲ್ಯಮಾಪನ ಮತ್ತು ನಿಯಮಗಳಿಗೆ ಅನುಸಾರವಾಗಿ ಸಂತ್ರಸ್ತ ರೈತರಿಗೆ ಪರಿಹಾರವನ್ನು ಒದಗಿಸಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸಿಎಂ ತಿಳಿಸಿದ್ದಾರೆ,(ಏಜೆನ್ಸೀಸ್).