ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!

baby-corona
Published on

ಬೆಂಗಳೂರು: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾ ಸೋಂಕು ಮಾಡುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಸೋಂಕು ಎಗ್ಗಿಲ್ಲದೇ ಹರಡುತ್ತಲೇ ಇದೆ.

ಈ ನಡುವೆಯೇ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ 17 ದಿನಗಳ ಕಂದಮ್ಮನಿಗೂ ಸೋಂಕು ತಗುಲಿದ್ದು ಅದು ಮೃತಪಟ್ಟಿದೆ. ದುರದೃಷ್ಟ ಎಂದರೆ ಈ ಮಗುವಿನ ಅಪ್ಪ-ಅಮ್ಮನಿಗೂ ಸೋಂಕು ತಗುಲಿರುವ ಕಾರಣ, ಅಂತ್ಯಸಂಸ್ಕಾರಕ್ಕೂ ಬರಲಾರದಂಥ ಸ್ಥಿತಿ! ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಮಗುವಿನ ಅಂತ್ಯಕ್ರಿಯೆಗೆ ಬರಲು ಅವಕಾಶವಿರಲಿಲ್ಲ.

ಮಗು ಹುಟ್ಟುವಾಗಲೇ ಅಮ್ಮನಿಗೂ ಸೋಂಕು ತಗುಲಿದ್ದರಿಂದ ಅಮ್ಮನಿಂದಲೂ ದೂರಮಾಡಲಾಗಿತ್ತು. ಅಪ್ಪನಿಗೂ ಸೋಂಕು ಇದ್ದುದರಿಂದ ಅಪ್ಪನೂ ಮಗುವಿನ ಸಂಪರ್ಕಕ್ಕೆ ಬರುವಂತಿರಲಿಲ್ಲ. ತಾಯಿಯ ಹಾಲಿನ ಬದಲು ಔಷಧಿಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು.

ಈ ಮಗು ಮೃತಪಟ್ಟಿರುವ ಕಾರಣ, ವೈದ್ಯರೇ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮುದ್ದು ಮುದ್ದಾಗಿರುವ ಪುಟ್ಟ ಕಂದನ ಅಂತ್ಯಸಂಸ್ಕಾರ ಮಾಡುವಾಗಿ ವೈದ್ಯಕೀಯ ಸಿಬ್ಬಂದಿ ಕಣ್ಣೀರಾಗಿದ್ದಾರೆ. ಕರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕವರ್‌ನಲ್ಲಿ ಸುತ್ತಿಕೊಂಡು ಪಾಲಕರೂ ಇಲ್ಲದೇ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net