ದಾಖಲೆ ಬರೆದ 16ನೇ ಶತಮಾನದ ಕಲಾಕೃತಿ: 120 ಕೋಟಿ ರೂ.ಗೆ ಮಾರಾಟವಾದ ವರ್ಣಚಿತ್ರ! |Painting

Bbau - 2025-10-31T200259.255
Published on

ನವದೆಹಲಿ: 16ನೇ ಶತಮಾನದ 29.8 ಸೆಂ.ಮೀ ಎತ್ತರ ಮತ್ತು 18.6 ಸೆಂ.ಮೀ ಅಗಲದ ಒಂದು ಪುಟ್ಟ ಭಾರತೀಯ ವರ್ಣಚಿತ್ರ ಬರೋಬ್ಬರಿ 13.6 ಮಿಲಿಯನ್ ಡಾಲರ್‌ಗಳಿಗೆ (ಸುಮಾರು 120 ಕೋಟಿ ರೂ) ಮಾರಾಟವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಶಾಸ್ತ್ರೀಯ ಭಾರತೀಯ ಕಲೆಗೆ ಈ ಹೊಸ ವಿಶ್ವ ಹರಾಜು ದಾಖಲೆಯನ್ನು ಸೃಷ್ಟಿಸಿದೆ. "ಎ ಫ್ಯಾಮಿಲಿ ಆಫ್ ಚೀತಾಸ್ ಇನ್ ಎ ರಾಕಿ ಲ್ಯಾಂಡ್‌ಸ್ಕೇಪ್" ಎಂಬ ಶೀರ್ಷಿಕೆಯ ಈ ವರ್ಣಚಿತ್ರವು ಮೊಘಲ್ ಯುಗದ ಕಲಾವಿದ ಬಸವನ್ ಅವರದ್ದಾಗಿದ್ದು, ಅಕ್ಟೋಬರ್ 30 ರಂದು ಲಂಡನ್‌ನಲ್ಲಿ ನಡೆದ ಕ್ರಿಸ್ಟೀಸ್ ಹರಾಜಿನಲ್ಲಿ ದಾಖಲೆಯ ಬೆಲೆಗೆ ಮಾರಾಟವಾಯಿತು.

1954ರ ಎಂಎಫ್ ಹುಸೇನ್ ಅವರ ಗ್ರಾಮ್ ಯಾತ್ರಾ ವರ್ಣಚಿತ್ರದ ದಾಖಲೆಯ ಹರಾಜಿನ ಬಳಿಕ ಮೊಘಲ್ ಯುಗದ ಈ ಚಿತ್ರಕಲೆಗೆ ಅಭೂತಪೂರ್ವ ಬೆಲೆ ಬಂದಿದೆ. ಈ ಚಿತ್ರವು ಈ ವರ್ಷದ 13.6 ಮಿಲಿಯನ್ ಡಾಲರ್‌ಗಳಿಗೆ ಆಧುನಿಕ ಭಾರತೀಯ ಕಲೆಯ ಅತ್ಯಂತ ದುಬಾರಿ ಕೃತಿಯಾಗಿದೆ.

ಖರೀದಿಸಿದ್ದು ಯಾರು?

1933ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದ ಸುಲ್ತಾನ್ ಮುಹಮ್ಮದ್ ಷಾ, ಅಗಾ ಖಾನ್ III ರ ಕಿರಿಯ ಮಗ ರಾಜಕುಮಾರ ಸದ್ರುದ್ದೀನ್ ಅಗಾ ಖಾನ್ ಅವರು ಖರೀದಿಸಿದ್ದಾರೆ. ಸದ್ರುದ್ದೀನ್ ಅಗಾ ಖಾನ್ ಮತ್ತು ಅವರ ಪತ್ನಿ ಕ್ಯಾಥರೀನ್ 60 ಮತ್ತು 80 ರ ದಶಕದ ನಡುವೆ ಕಲಾಕೃತಿಗಳನ್ನು ಸಂಗ್ರಹಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net